ಶ್ರವಣಬೆಳಗೊಳ : ರಾಜ್ಯಾಭಿಷೇಕ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Venkaiah-02

ಶ್ರವಣಬೆಳಗೊಳ, ಫೆ.10-ಮಹಾಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯಾಭಿಷೇಕ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಚಾಲನೆ ನೀಡಿದರು.  ಚಾವುಂಡರಾಯ ಸಭಾಮಂಟಪದಲ್ಲಿ ಆದಿನಾಥ ತೀರ್ಥಂಕರರಿಗೆ ಪಂಚಕಲ್ಯಾಣ ಮಹೋತ್ಸವ ನಡೆಯುತ್ತಿದ್ದು, ಇಂದು ರಾಜ್ಯಾಭಿಷೇಕ ವಿಜೃಂಭಣೆಯಿಂದ ನೆರವೇರಿತು. ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ವರ್ಧಮಾನ ಸಾಗರ ದಿಗಂಬರ ಮುನಿಗಳು ಸಾನಿಧ್ಯ ವಹಿಸಿದ್ದರು.
ರಾಜ್ಯಪಾಲ ವಜುಭಾಯಿವಾಲಾ, ಕೇಂದ್ರ ಸಚಿವ ಅನಂತ್‍ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಶಾಸಕ ಬಾಲಕೃಷ್ಣ ಪಾಲ್ಗೊಂಡಿದ್ದರು.
ಆದಿನಾಥ ತೀರ್ಥಂಕರ ಮೂರ್ತಿಗೆ ವಿಧಿ-ವಿಧಾನದಂತೆ ಕಿರೀಟ ತೊಡಿಸಿ ಚಿನ್ನದ ಸರವನ್ನು ಹಾಕುವ ಮೂಲಕ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ರಾಜ್ಯಾಭಿಷೇಕಕ್ಕೆ ಚಾಲನೆ ನೀಡಲಿದ್ದು, ಧಾರ್ಮಿಕ ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.

ಪಂಚಕಲ್ಯಾಣದ ಪವಿತ್ರ ಕಾರ್ಯಕ್ರಮವಾಗಿರುವ ರಾಜ್ಯಾಭಿಷೇಕ ವಿಶೇಷವಾದ ಮಹತ್ವವಿದೆ. ಪ್ರಥಮ ತೀರ್ಥಂಕರ ಆದಿನಾಥರಿಗೆ ಮೊದಲ ಬಾರಿಗೆ ರಾಜ್ಯಾಭಿಷೇಕ ನಡೆದಿತ್ತು ಎಂಬ ನಂಬಿಕೆ ಜೈನ ಸಮುದಾಯದವರಾಗಿದ್ದು, ಭಾರತೀಯ ಜ್ಞಾನ ಪೀಠದ ಸಹಯೋಗದೊಂದಿಗೆ 108 ಪುಸ್ತಕಗಳು ಒಂದು ಕೋಟಿ ವೆಚ್ಚದಲ್ಲಿ ಮರುಮುದ್ರಣಗೊಂಡು ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಲೋಕಾರ್ಪಣೆ ಮಾಡಿದ್ದಕ್ಕೆ ನನ್ನ ಕ್ಷೇತ್ರದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಭಟ್ಟಾರಕ ಸ್ವಾಮೀಜಿ ತಿಳಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin