ಸೆಕ್ಯೂಲರ್ ನಾಟಕ ಸಾಕುಮಾಡಿ : ರಾಹುಲ್‍ಗೆ ಶೆಟ್ಟರ್ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Jagadish--01

ಬೆಂಗಳೂರು, ಫೆ.11-ಸೆಕ್ಯೂಲರ್ ಹೆಸರಿನಲ್ಲಿ ಮಠ-ಮಂದಿರವನ್ನು ಮರೆತ್ತಿದ್ದ ರಾಹುಲ್ ಗಾಂಧಿ ಅವರು ಈಗ ಹಿಂದೂಗಳ ವೋಟ್‍ಗಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.  ನಗರದ ಚಾಮುಂಡೇಶ್ವರಿ ಬಡಾವಣೆಯ ಸ್ಲಮ್‍ನಲ್ ಕಳೆದ ರಾತ್ರಿ ವಾಸ್ತವ್ಯ ಹೂಡಿ ಇಂದು ಬೆಳಗ್ಗೆ ಉಪಹಾರ ಸೇವಿಸಿ ಸ್ಲಂ ದೌರ್ಭಾಗ್ಯ ಪುಸ್ತಕ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಸೆಕ್ಯೂಲರ್ ನಾಟಕ ಬಿಟ್ಟು ಎಲ್ಲರನ್ನು ಸಮಾನಾಗಿ ಕಾಣುವ ಬುದ್ದಿ ಬೆಳೆಸಿಕೊಳ್ಳಲಿ ಎಂದು ಟೀಕಿಸಿದ್ದಾರೆ. ಮಹದಾಯಿ ಬಗ್ಗೆ ರಾಹುಲ್ ಗಾಂಧಿಯವರು ಏನೂ ಹೇಳಲಿಲ್ಲ. ಕೇವಲ ಪ್ರಧಾನಿಯವರನ್ನು ಗುರಿ ಮಾಡಿ ಆರೋಪಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನವರ ಈ ನಾಟಕವನ್ನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತವಾಗಿರುವ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಹೇಳಿದ್ದಾರೆ.

Facebook Comments

Sri Raghav

Admin