ಒಮನ್ ಸುಲ್ತಾನ್-ಮೋದಿ ಭೇಟಿ : 8 ಮಹತ್ವದ ಒಪ್ಪಂದಗಳಿಗೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

Oman

ಮಸ್ಕಟ್, ಫೆ.12-ಮಧ್ಯಪ್ರಾಚ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಮನ್ ದೊರೆ ಸುಲ್ತಾನ್ ಕಾಬೂಸ್ ಬಿನ್ ಸಾಯಿದ್ ಅಲ್ ಸಾಯಿದ್ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿದರು. ಇದೇ ವೇಳೆ ಭಾರತ-ಒಮನ್ ನಡುವೆ ರಕ್ಷಣಾ, ಆರೋಗ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಎಂಟು ಪ್ರಮುಖ ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ.  ತಮ್ಮ ಮೂರನೇ ಮತ್ತು ಅಂತಿಮ ಹಂತದ ಪ್ರವಾಸವಾಗಿ ನಿನ್ನೆ ದುಬೈನಿಂದ ಒಮನ್ ರಾಜಧಾನಿ ಮಸ್ಕಟ್‍ಗೆ ಆಗಮಿಸಿದ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ನಂತರ ಮಸ್ಕಟ್ ಅರಮನೆಯಲ್ಲಿ ಅವರು ದೊರೆ ಸುಲ್ತಾನ್ ಕಾಬೂಸ್ ಬಿನ್ ಸಾಯಿದ್ ಅಲ್ ಸಾಯಿದ್ ಅವರನ್ನು ಭೇಟಿ ಮಾಡಿ ವ್ಯಾಪಕ-ಶ್ರೇಣಿ ಮಾತುಕತೆ ನಡೆಸಿದರು. ವ್ಯಾಪಾರ ಮತ್ತು ಬಂಡವಾಳ ಹೂಡಿಕೆ, ಇಂಧನ, ರಕ್ಷಣೆ ಮತ್ತು ಭದ್ರತೆ, ಆಹಾರ ಭದ್ರತೆ ಮತ್ತು ಪ್ರಾದೇಶಿಕ ವಿಷಯಗಳಲ್ಲಿ ಪರಸ್ಪರ ಸಹಕಾರ ಬಲವರ್ಧನೆ ಕುರಿತು ಈ ಇಬ್ಬರು ನಾಯಕರು ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಒಮನ್ ಅಭಿವೃದ್ದಿಗಾಗಿ ಭಾರತೀಯರು ನೀಡುತ್ತಿರುವ ಪ್ರಾಮಾಣಿಕ ಮತ್ತು ಪರಿಶ್ರಮದ ಕೊಡುಗೆಯನ್ನು ಸುಲ್ತಾನರು ಪ್ರಶಂಸಿದರು.

Facebook Comments

Sri Raghav

Admin