ಕೊನೆಗೂ ಪಾಪಿ ಹಫೀಜ್ ನನ್ನ ಉಗ್ರನೆಂದು ಒಪ್ಪಿಕೊಂಡ ಪಾಕ್..!

Hafeex-Syeed

ನವದೆಹಲಿ, ಫೆ.13- ಕೊನೆಗೂ ಜಾಗತಿಕ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮುಂಬೈ ಮಹಾನಗರದ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿ ಹಾಗೂ ಜಮಾತೆ ದಾವಾ ಸಂಘಟನೆಯ ಮುಖ್ಯಸ್ಥ ಹಫೀದ್ ಸಯ್ಯದ್‍ನನ್ನು ಉಗ್ರ ಎಂದು ಘೋಷಿಸಿದೆ. ನಿನ್ನೆಯಷ್ಟೇ ಪಾಕಿಸ್ತಾನದ ರಾಷ್ಟ್ರಾಧ್ಯಕ್ಷರಾದ ಮಮ್‍ನೂನ್ ಹುಸೇನ್‍ರವರು ಭಯೋತ್ಪಾದನಾ ನಿಗ್ರಹ ಕಾಯ್ದೆಯ ತಿದ್ದುಪಡಿಗೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ಹಫೀಜ್‍ನನ್ನು ಉಗ್ರ ಎಂದು ಘೋಷಣೆ ಮಾಡಲಾಗಿದೆ.

ಹಫೀಜ್ ಉಗ್ರ ಎಂದು ಘೋಷಣೆಯಾಗುತ್ತಿದ್ದಂತೆ ಆತನ ಮನೆ ಹಾಗೂ ಜಮಾತೆ ಉದ್ ದಾವಾ ಮುಖ್ಯ ಕಚೇರಿಗೆ ಹಾಕಲಾಗಿದ್ದ ಬ್ಯಾರಿಕೇಡ್‍ಗಳು ಹಾಗೂ ಅಂಗ ರಕ್ಷಕರನ್ನು ಹಿಂಪಡೆಯಲಾಗಿದೆ.  ಪಾಕಿಸ್ತಾನದ ಒಟ್ಟು 26 ಸ್ಥಳಗಳಲ್ಲಿ ಜಮಾತೆ ಉದ್ ಕಚೇರಿಗೆ ಭದ್ರತೆ ಹಾಗೂ ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ಇವೆಲ್ಲವನ್ನು ನಾವು ತಕ್ಷಣದಿಂದಲೇ ಜಾರಿಯಾಗುವಂತೆ ತೆಗೆದು ಹಾಕಿದ್ದೇವೆ ಎಂದು ಲಾಹೋರ್ ಡಿಐಜಿ ಡಾ.ಹೈದರ್ ಅಷ್ರಫ್ ತಿಳಿಸಿದ್ದಾರೆ.

ಪಾಕ್‍ನಲ್ಲಿರುವ ಭಯೋತ್ಪಾದನಾ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ , ಜಮಾತೆ ಉದ್ ದಾವಾ , ಹರ್ಕತ್ ಉಲ್ ಮುಜಾಹಿದ್ದೀನ್ ಸೇರಿದಂತೆ ಕೆಲವು ಸಂಘಟನೆಗಳಿಗೆ ವಿಶ್ವಸಂಸ್ಥೆ ನಿಷೇಧ ಹಾಕಿದೆ. ಈ ಸಂಘಟನೆಗಳಿಗೆ ಯಾವುದೇ ರೀತಿಯ ಹಣಕಾಸು ನೆರವು ಸೇರಿದಂತೆ ಸಹಕಾರ ನೀಡಬಾರದೆಂದು ಪ್ರಮುಖ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ತಾಕೀತು ಮಾಡಿದೆ. ಒಟ್ಟು 27 ಸಂಘಟನೆಗಳಿಗೆ ನಿಷೇಧ ಹೇರಿರುವ ವಿಶ್ವಸಂಸ್ಥೆ ಹಣಕಾಸು ನೆರವು ಸಿಗದಂತೆ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಪಾಕ್‍ಗೆ ಸ್ಪಷ್ಟ ಆದೇಶ ನೀಡಿತ್ತು.

ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಆಗಿರುವ ಹಫೀಜ್ ಸಯ್ಯದ್‍ಗೆ ಈವರೆಗೆ ಪಾಕ್ ಎಲ್ಲಾ ರೀತಿಯ ನೆರವು , ರಕ್ಷಣೆ ನೀಡಿತ್ತು. ಆತನನ್ನು ಭಯೋತ್ಪಾದಕ ಎಂದು ಮಾತ್ರ ಘೋಷಣೆ ಮಾಡಿರಲಿಲ್ಲ.ನೂರಾರು ಜನರ ಮಾರಣ ಹೋಮ ನಡೆಸಿರುವ ಈತ ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿಯಲ್ಲಿದ್ದಾನೆ.

Facebook Comments

Sri Raghav

Admin