ಗೃಹ ಸಚಿವರ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ವೇಳೆ ಪೊಲೀಸರ ದರ್ಪ

ಈ ಸುದ್ದಿಯನ್ನು ಶೇರ್ ಮಾಡಿ

BP-P

ಬೆಂಗಳೂರು ಫೆ.13 : ಹಿಂದು ಕಾರ್ಯಕರ್ತ ಸಂತೋಷ್‌ ಹತ್ಯೆಗೆ ಸ್ಕ್ರೂ ಡ್ರೈವರ್ ಬಳಸಲಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರ ಧೋರಣೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಂದು ಜೆ.ಸಿ.ನಗರದಲ್ಲಿ ಪ್ರತಿಭಟನೆ ನಡೆಸಿದರು.  ಜಯಮಹಲ್ ನ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಗೃಹ ಇಲಾಖೆಯ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಪೊಲೀಸರು ಯುವಮೋರ್ಚಾ ಕಾರ್ಯಕರ್ತರನ್ನು ಒತ್ತಡ ಹೇರಿ ಬಂಧಿಸಲು ಮುಂದಾದರು. ಆಗ ಯಾವುದೇ ಪ್ರಚೋದನೆ ಇಲ್ಲದೇ ಬಂಧಿಸುತ್ತಿರುವುದನ್ನು ಪ್ರಶ್ನಿಸಿದ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ತಮ್ಮೇಶಗೌಡರ ತಲೆ ಕೂದಲನ್ನು ಎಳೆದು ಎಸಿಪಿ ರವಿಪ್ರಸಾದ್ ದರ್ಪ ತೋರಿದರು. ಲಾಠಿ ಚಾರ್ಜ್ ಮೂಲಕ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಯತ್ನಿಸಿದರು. ನಂತರ ಎಲ್ಲಾ ಕಾರ್ಯಕರ್ತರನ್ನು ಬಲವಂತವಾಗಿ ಬಂಧಿಸಿ ಬೇರೆಡೆಗೆ ಕರೆದ್ಯೊಯಲಾಯಿತು.

ಪೊಲೀಸರ ದೌರ್ಜನ್ಯಕ್ಕೆ ಯುವಮೋರ್ಚಾ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದೇ ರೀತಿ ಧೋರಣೆ ಮುಂದುವರೆದರೆ ಗೃಹ ಸಚಿವ ಶ್ರೀ ರಾಮಲಿಂಗಾರೆಡ್ಡಿ ಮನೆ ಎದುರು ಪ್ರತಿಭಟಿಸುವುದಾಗಿ ಶ್ರೀ ತಮ್ಮೇಶಗೌಡ ಎಚ್ಚರಿಕೆ ನೀಡಿದರು. ನಂತರ ಶ್ರೀ ತಮ್ಮೇಶ ಗೌಡ, ನಗರ ಅಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ನಗರ ಜಿಲ್ಲೆ ಅಧ್ಯಕ್ಷರಾದ ಶ್ರೀ ನವೀನ ರೆಡ್ಡಿ ಹಾಗೂ ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.

Facebook Comments

Sri Raghav

Admin