ನೋಟ್ ಬ್ಯಾನ್ ಪ್ರಧಾನಿಯ ತೀರ್ಮಾನ ಅಲ್ಲ, ಆರ್‍ಎಸ್‍ಎಸ್‍ನ ಪ್ಲಾನ್ : ರಾಹುಲ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Rahul--02

ಕಲಬುರಗಿ, ಫೆ.13-ನೋಟು ಅಮಾನೀಕರಣ ಪ್ರಧಾನಿಯ ತೀರ್ಮಾನ ಅಲ್ಲ, ಆರ್‍ಎಸ್‍ಎಸ್‍ನ ಆಲೋಚನೆಯನ್ನು ಪ್ರಧಾನಿ ರಾತ್ರೋರಾತ್ರಿ ಜಾರಿಗೊಳಿಸಿದರು ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮುಂದೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಜಿಎಸ್‍ಟಿಯನ್ನು ಸುಧಾರಿಸಿ ಸರಳೀಕರಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಲಬುರಗಿಯಲ್ಲಿ ಉದ್ಯಮಿಗಳು ಮತ್ತು ವೃತ್ತಿಪರರ ಜೊತೆ ಸಂವಾದ ನಡೆಸಿದ ರಾಹುಲ್‍ಗಾಂಧಿ ತಮ್ಮ ಮಾತಿನುದ್ದಕ್ಕೂ ಬಿಜೆಪಿಯ ಆಡಳಿತ ಮತ್ತು ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ನೋಟು ಅಮಾನೀಕರಣ ಆರ್‍ಬಿಐನ ಸೂಚನೆಯಂತಾಗಲೀ, ಹಣಕಾಸು ಇಲಾಖೆಯ ಅಧಿಕಾರಿಗಳ ಅಭಿಪ್ರಾಯದಿಂದಾಗಲೀ, ಅರುಣ್ ಜೇಟ್ಲಿ ಆಲೋಚನೆಯಿಂದಾಗಲೀ, ಕೊನೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಲೋಚನೆಯೇ ಅಲ್ಲ. ಅದು ಆರ್‍ಎಸ್‍ಎಸ್‍ನ ಯೋಚನೆ ಎಂದು ಗಂಭೀರ ಆರೋಪ ಮಾಡಿದರು. ಆರ್‍ಎಸ್‍ಎಸ್ ಹೇಳಿದ್ದನ್ನು ಪ್ರಧಾನಿ ಹಿಂದೆ-ಮುಂದೆ ನೋಡದೆ ಏಕಾಏಕಿ ಜಾರಿಗೊಳಿಸಿದ್ದಾರೆ. ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಮಾಡಿದ್ದು ಒಳ್ಳೆಯ ನಿರ್ಧಾರ ಎಂದು ದೇಶದ ಯಾವೊಬ್ಬ ವ್ಯಕ್ತಿಯೂ ಹೇಳಿಲ್ಲ.

ಸಾಮಾನ್ಯವಾಗಿ ತಜ್ಞರನ್ನು ಕೇಳಿಕೊಂಡು ಜನಾಭಿಪ್ರಾಯಪಡೆದು ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಮೋದಿಯವರು ಆ ರೀತಿ ಮಾಡದೆ, ಆರ್‍ಎಸ್‍ಎಸ್ ಸೂಚನೆಯಂತೆ ನಡೆದುಕೊಂಡರು. ನೋಟು ರದ್ಧತಿಯಿಂದ ಭ್ರಷ್ಟರು ಸಂಗ್ರಹಿಸಿದ್ದ ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿಕೊಳ್ಳಲು ಅನುಕೂಲವಾಯಿತು. ಉಳಿದಂತೆ ಜನಸಾಮಾನ್ಯರಿಗೆ ಕಿಂಚಿತ್ತೂ ಲಾಭವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಆರ್‍ಎಸ್‍ಎಸ್‍ನ ನಿಯಂತ್ರಣದಲ್ಲಿದೆ. ಪ್ರತಿಯೊಬ್ಬ ಸಚಿವನ ಕಚೇರಿಯಲ್ಲೂ ಒಬ್ಬೊಬ್ಬ ವಿಶೇಷ ಕರ್ತವ್ಯ ಅಧಿಕಾರಿ (

Facebook Comments

Sri Raghav

Admin