ಪೊಕ್ರಾನ್ ನಲ್ಲಿ ಸಂಭವಿಸಿದ ಸ್ಪೋಟದಲ್ಲಿ ಕರ್ನಾಟಕದ ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Javed--01

ಹರಿಹರ, ಫೆ.13: ರಾಜಸ್ಥಾನದ ಪೊಕ್ರಾನ್ ನಲ್ಲಿ ಕಾರ್ಯಾಚರಣೆಯ ಸಂದರ್ಭ ಮದ್ದುಗುಂಡುಗಳು ಸ್ಪೋಟಗೊಂಡ ಪರಿಣಾಮ ಕರ್ನಾಟಕದ ಯೋಧನೊಬ್ಬ ಹುತಾತ್ಮರಾಗಿದ್ದಾರೆ.ಘಟನೆ ನಡೆದಿದೆ. ಹರಿಹರ ಪಟ್ಟಣದ ಪಿ.ಬಿ.ರಸ್ತೆ ನಿವಾಸಿ ಜಾವಿದ್( 32) ಹುತಾತ್ಮ ಯೋಧ. ಇವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಕೆಟ್ ಲಾಂಚರ್ ಗಳಿಂದ ಸಿಡಿಸಲಾಗಿದ್ದ ಮದ್ದುಗುಂಡುಗಳನ್ನು ಸಿಡಿದಿರಲಿಲ್ಲ. ಈ ದ್ದುಗುಂಡುಗಳನ್ನು ನಾಶ ಮಾಡುವ ಸಂದರ್ಭ ಅವುಗಳು ಸಿಡಿದಿವೆ. ಘಟನೆಯಲ್ಲಿ ಜಾವಿದ್ ಮೃತಪಟ್ಟರೆ ಮತ್ತೊಬ್ಬರು ಗಾಯಗೊಂಡಿದ್ದಾರೆ. ಮದ್ದುಗುಂಡುಗಳು ದೋಷಪೂರಿತವಾಗಿದ್ದೇ ಕಾರಣ ಎನ್ನಲಾಗಿದೆ.

14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದ ಜಾವೇದ್. ವೈರಿಗಳ ದಾಳಿ ಅಥವಾ ಪ್ರಯೋಗದ ವೇಳ ನಡೆದ ಘಟನೆ ಎಂಬುದನ್ನ ಸೇನೆಯ ಅಧಿಕಾರಿಗಳು ಸ್ಪಷ್ಟ ಪಡಿಸಿಲ್ಲ. ಬಾಂಬ್ ಸ್ಪೋಟ್ ದಲ್ಲಿ ಜಾವೇದ್ ಸಾವನ್ಬಪ್ಪಿರುವ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠ ರ ಮೂಲಕ ಜಾವೇದ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ .  ನಾಳೆ ರಾತ್ರಿ ವೇಳೆಗೆ ಯೋಧನ ಪಾರ್ಥಿವ ಶರೀರ ಹರಿಹರಕ್ಕೆ ಬರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Facebook Comments

Sri Raghav

Admin