ಮಹಾಮಸ್ತಕಾಭಿಷೇಕ : ಜರ್ಮನ್ ಮಾದರಿಯ ಅಟ್ಟಣಿಗೆಯ ಸಾಮರ್ಥ್ಯ ಪರಿಶೀಲಿನೆ

ಈ ಸುದ್ದಿಯನ್ನು ಶೇರ್ ಮಾಡಿ

shravanabelagola-1
ಹಾಸನ, ಫೆ.13- ವಿಶ್ವ ವಿಖ್ಯಾತ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ವಿಂಧ್ಯಗಿರಿ ಬೆಟ್ಟದ ಬಾಹುಬಲಿ ಮೂರ್ತಿಯ ಸುತ್ತ ನಿರ್ಮಾಣ ಮಾಡಲಾಗಿರುವ ಜರ್ಮನ್ ಮಾದರಿಯ ಅಟ್ಟಣಿಗೆಯ ಸಾಮಥ್ರ್ಯವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಇಂದು ಪರಿಶೀಲನೆ ನಡೆಸಿತು. 21ನೇ ಶತಮಾನದ ಎರಡನೇ ಮಹಾಮಸ್ತಕಾಭಿಷೇಕ ಇದಾಗಿದ್ದು, ಫೆ.7ರಿಂದ 26ರವೆರೆಗೆ ಗೊಮ್ಮಟನಿಗೆ ಮಹಾಮಜ್ಜನ ನಡೆಯಲಿದೆ. ವಿಶೇಷವಾಗಿ ಫೆ.17ರಂದು ಪ್ರಮುಖ ಅಭಿಷೇಕ ಪ್ರಾರಂಭಗೊಳ್ಳಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶದಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ನಿರ್ಮಿತ ನೂತನ ಅಟ್ಟಣಿಗೆ ಎಷ್ಟು ಮಂದಿಯ ಸಾಮಥ್ರ್ಯ ಹೊಂದಿದೆ ಎಂಬ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಕ್ಷೇತ್ರದಲ್ಲಿ ಆಗಬೇಕಾದ ಬಹುತೇಕ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿವೆ. ಇಲ್ಲಿಗೆ ಬರುವ ಭಕ್ತರು, ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮಾತನಾಡಿ, ನೂತನವಾಗಿ ನಿರ್ಮಿಸಲಾಗಿರುವ ಈ ಅಟ್ಟಣಿಗೆಯಲ್ಲಿ 5 ಸಾವಿರ ಮಂದಿ ಕೂರಬಹುದಾಗಿದೆ. ನಾವು ಅಷ್ಟೇ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಿದ್ದೇವೆ. ಹಾಗೂ ಯಾವುದೇ ಅವಘಡ, ಅಚಾತುರ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿದ್ದು, ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು ಫೆ. 17ರಂದು ಪ್ರಮುಖ ಅಭಿಷೇಕ ಪ್ರಾರಂಭವಾಗಲಿದ್ದು ಅಂದು ಬಾಹುಬಲಿಗೆ 108 ಕಳಶಾಭಿಷೇಕ ನೆರವೇರಲಿದೆ. ಹಾಗಾಗಿ ಅಂದು ಲಕ್ಷಾಂತರ ಭಕ್ತರು ಆಗಮಿಸಲಿದ್ದು ಎಲ್ಲ ರೀತಿಯ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin