ಲಂಕಾ ರಕ್ಷಣಾ ಪಡೆ ಅಟ್ಟಹಾಸಕ್ಕೆ ಬೆದರಿದ ತಮಿಳುನಾಡಿನ 2000 ಬೆಸ್ತರು

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ, ಫೆ.13- ಭಾರತ ಮತ್ತು ಶ್ರೀಲಂಕಾ ನಡುವೆ ಜಲಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ದ್ವೀಪರಾಷ್ಟ್ರ ಸಾಗರ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 2000 ಬೆಸ್ತರನ್ನು ಶ್ರೀಲಂಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಬೆದರಿಸಿ ಓಡಿಸಿದ್ದಾರೆ ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಎಸ್.ಎಮಿರೇಟ್ ಆರೋಪಿಸಿದ್ದಾರೆ.

ಕಚ್ಚಾತಿವು ಪ್ರದೇಶದಲ್ಲಿ 400 ಯಾಂತ್ರೀಕೃತ ದೋಣಿಗಳೊಂದಿಗೆ ಸುಮಾರು 2000 ಬೆಸ್ತರು ಮೀನುಗಾರಿಕೆಯಲ್ಲಿ ತೊಡಗಿದ್ದರು. ಆಗ ಸ್ಥಳಕ್ಕೆ ದಾವಿಸಿದ ಲಂಕಾ ನೌಕಾಪಡೆ ಸಿಬ್ಬಂದಿ ಬಲೆಗಳನ್ನು ಹರಿದು ಹಾಕಿ ಬೆಸ್ತರನ್ನು ಬೆದರಿಸಿ ಆ ಪ್ರದೇಶದಿಂದ ಅಟ್ಟಿದರು. ಮೀನುಗಾರಿಕೆ ನಡೆಸದೆ ಬೆಸ್ತರು ಹಿಂದಿರುಗಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಫೆ.11 ಮತ್ತು 6ರಂದು ಇದೇ ಪ್ರದೇಶದಲ್ಲಿ ಕ್ರಮವಾಗಿ 3000 ಮತ್ತು 1500ಕ್ಕೂ ಹೆಚ್ಚು ತಮಿಳುನಾಡು ಬೆಸ್ತರನ್ನು ಇದೇ ರೀತಿ ಬೆದರಿಸಿ ವಾಪಸ್ ಕಳುಹಿಸಲಾಗಿತ್ತು.

Facebook Comments

Sri Raghav

Admin