ಸೇನಾ ಶಿಬಿರದ ಮೇಲೆ ಉಗ್ರರ ದಾಳಿ : ಸತ್ತವರ ಸಂಖ್ಯೆ 11ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Army-Camp--01

ಜಮ್ಮು, ಫೆ.13-ಕಾಶ್ಮೀರ ಕಣಿವೆಯ ಜಮ್ಮುವಿನ ಸಂಜ್ವಾನ್ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಮೂಲದ ಜೈಷ್-ಎ-ಮಹಮದ್(ಜೆಇಎಂ) ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ. ಮಿಲಿಟರಿ ಕ್ಯಾಂಪ್ ಒಳಗೆ ಉಗ್ರರು ಮತ್ತು ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಇಂದು ಮತ್ತೊಬ್ಬ ಯೋಧನ ಮೃತದೇಹ ಪತ್ತೆಯಾಗಿದೆ. ಇದರಿಂದಾಗಿ ಉಗ್ರರ ದಾಳಿಯಲ್ಲಿ ಒಟ್ಟು ಆರು ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿ ವೇಳೆ ನಾಗರಿಕರೊಬ್ಬರು ಬಲಿಯಾಗಿದ್ದು, ನಂತರ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿತ್ತು.

ಎನ್‍ಕೌಂಟರ್ ನಡೆದ ಸ್ಥಳವನ್ನು ಸ್ವಚ್ಚಗೊಳಿಸುತ್ತಿದ್ದಾಗ ಇಂದು ಮುಂಜಾನೆ ಮತ್ತೊಬ್ಬ ಯೋಧನ ಮೃತ ದೇಹ ಪತ್ತೆಯಾಯಿತು ಎಂದು ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ. ಫೆ.10ರಂದು ಮುಂಜಾನೆ ಜೆಕೆಎಲ್‍ಐನ 36ನೇ ಬ್ರಿಗೇಡ್ ಮೇಲೆ ಜೆಇಎಂ ಉಗ್ರರು ದಾಳಿ ನಡೆಸಿದ್ದರು.

Facebook Comments

Sri Raghav

Admin