ಮಠದ ಆಸ್ತಿ ಮಾರಿದ್ದ ನಕಲಿ ಸ್ವಾಮೀಜಿ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಶಿವಮೊಗ್ಗ, ಫೆ.14- ನಾನೇ ಮಠದ ಹಿರಿಯ ಸ್ವಾಮೀಜಿ ಎಂದು ಹೇಳಿಕೊಂಡು ನಕಲಿ ಸಹಿ ಬಳಸಿ ಕೋಟ್ಯಂತರ ಆಸ್ತಿಯನ್ನು ಮಾರಾಟ ಮಾಡಿದ್ದ ನಕಲಿ ಸ್ವಾಮೀಜಿ ಮತ್ತು ಆತನ ಸಹಾಯಕನನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ.  ನಕಲಿ ಸ್ವಾಮೀಜಿ ಶಿವಕುಮಾರ, ಸಹಾಯಕ ವೀರೇಂದ್ರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.  ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮಠದ ಆಸ್ತಿ ಹಾಗೂ ಹಾರನಹಳ್ಳಿ ಗ್ರಾಮದಲ್ಲಿರುವ ರಾಮಲಿಂಗೇಶ್ವರ ಮಠದ ಕೋಟ್ಯಂತರ ಆಸ್ತಿಯನ್ನು ಈ ಇಬ್ಬರು ಸೇರಿ ನಕಲಿ ಸಹಿ ಬಳಸಿ ಮಾರಾಟ ಮಾಡಿದ್ದರು ಎನ್ನಲಾಗಿದೆ.

2014ರಲ್ಲಿ ಚಂದ್ರಮೌಳೇಶ್ವರ ಸ್ವಾಮೀಜಿಯವರು ನಿಧನರಾದ ಬಳಿಕ ಮಠದ ಆಸ್ತಿ ಮೇಲೆ ಕಣ್ಣು ಹಾಕಿದ್ದ ಶಿವಕುಮಾರ್, ನಾನೇ ಈ ಮಠದ ಹಿರಿಯ ಸ್ವಾಮೀಜಿ ಎಂದು ಹೇಳಿಕೊಂಡು ಮಠದ ಆಸ್ತಿಯನ್ನುಲಪಟಾಯಿಸಿದ್ದರು. ಇದೀಗ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin