ಗುಂಡಿಕ್ಕಿ ಮದರಸಾ ಮೌಲ್ವಿಯ ಹತ್ಯೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Firing--1

ಮುಜಾಫರ್‍ನಗರ್, ಫೆ.15-ಅಪರಿಚಿತ ದುಷ್ಕರ್ಮಿಗಳ ಮದರಸಾ ಧಾರ್ಮಿಕ ಮುಖಂಡರೊಬ್ಬರ ಮೇಲೆ ಗುಂಡಿಟ್ಟು ಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.   ಶಾಮ್ಲಿ ಜಿಲ್ಲೆಯ ಹಾಥ್ ಚೋಯ್ಯ ಗ್ರಾಮದ ತಮ್ಮ ಮನೆಯಿಂದ ಮದರಸಾಗೆ ಹೋಗುತ್ತಿದ್ದ ಮೌಲ್ವಿ ತಾಲಿಬ್ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದರು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ರಾಜೇಶ್ ತಿವಾರಿ ತಿಳಿಸಿದ್ದಾರೆ.  ತೀವ್ರ ಗಾಯಗೊಂಡಿರುವ ತಾಲಿಬ್‍ರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin