ನಾಳೆ ಕಾವೇರಿ ಅಂತಿಮ ತೀರ್ಪು, ಕನ್ನಡಿಗರಿಗೆ ನ್ಯಾಯವೋ.. ಅನ್ಯಾಯವೋ..?
ನವದೆಹಲಿ, ಫೆ.15-ದೀರ್ಘ ಕಾಲದಿಂದಲೂ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಕಾವೇರಿ ನದಿ ನೀರು ಹಂಚಿಕೆ ಪ್ರಕರಣದ ಸಂಬಂಧ ನಾಳೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಲಿದ್ದು, ಎಲ್ಲರ ಚಿತ್ತ ಸರ್ವೋಚ್ಚ ನ್ಯಾಯಾಲಯದತ್ತ ಹರಿದಿದೆ.2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ಪ್ರಕಟಿಸಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯಕ್ಕೆ ವಾರ್ಷಿಕ 270 ಅಡಿ ಟಿಎಂಸಿ, ತಮಿಳುನಾಡುಗೆ 419 ಹಾಗೂ ಕೇರಳಕ್ಕೆ 30 ಟಿಎಂಸಿ ನೀರು ಹಂಚಿಕೆ ಆದೇಶವನ್ನು ಘೋಷಿಸಿತ್ತು.
ಈ ಆದೇಶದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಈ ಮೂರು ರಾಜ್ಯಗಳು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದವು. ದೀರ್ಘ ಕಾಲದಿಂದಲೂ ಈ ವಿವಾದ ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ನಾಳೆ ಸುಪ್ರೀಂಕೋರ್ಟ್ ನೀಡಲಿರುವ ರಾಜ್ಯದ ಪರವಾಗಲಿದೆಯೇ ಎಂಬ ನಿರೀಕ್ಷೆ ಮೂಡಿಸಿದೆ. ರಾಜ್ಯಕ್ಕೆ ನ್ಯಾಯ ಲಭಿಸುತ್ತದೆಯೋ ಅಥವಾ ಮತ್ತೆ ಅನ್ಯಾಯವಾಗಲಿದೆಯೇ ಎಂಬ ಜಿಜ್ಞಾಸೆ ರಾಜ್ಯದ ಜನರನ್ನು ಕಾಡುತ್ತಿದೆ. ಒಟ್ಟಾರೆ ನಾಳಿನ ಫಲಿತಾಂಶ ಕುತೂಹಲ ಕೆರಳಿಸಿದೆ.