ಶ್ರವಣಬೆಳಗೊಳದಲ್ಲಿ ನಾಳೆ ಸ್ತಬ್ದ ಚಿತ್ರ, ವಾದ್ಯತಂಡಗಳ ಬೃಹತ್ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

shravanabelagola-1

ಶ್ರವಣಬೆಳಗೊಳ,ಫೆ.15-ಜೈನಕಾಶಿ ಶ್ರವಣಬೆಳಗೊಳದಲ್ಲಿ ಮಹಾ ಮಸ್ತಕಾಭಿಷೇಕದ ಅಂಗವಾಗಿ ನಾಳೆ ವಿಂಧ್ಯಗಿರಿ ಬೆಟ್ಟದಲ್ಲಿ ಬೃಹತ್ ಮೆರವಣಿಗೆ ಜರುಗಲಿದ್ದು, ದೇಶದ ವಿವಿಧೆಡೆಯ ಸ್ತಬ್ದ ಚಿತ್ರಗಳು ಮತ್ತು ವಾದ್ಯತಂಡಗಳು ಭಾಗವಹಿಸಲಿವೆ. ಪ್ರಚಾರ ವಾಹನ, ಮಹಾಮಸ್ತಾಕಾಬಿಷೇಕ ಮಹೋತ್ಸವದ ಲೋಗೋ, ಬ್ಯಾಂಡ್‍ಆರ್ಕೇಸ್ಟ್ರಾ, ಚಿಟ್ಟಿಮೇಳ, ಐದು ವರ್ಣದ ಧರ್ಮಧ್ವಜ, ಮರದ ಆನೆ, ನಂದಿಧ್ವಜ, ಚಂದ್ರಗಿರಿಯಿಂದ ಇಂದ್ರಗಿರಿಗೆ ಬಾಣ ಬಿಡುತ್ತಿರುವ ದೃಶ್ಯ, ಯಕ್ಷಗಾನ, ಕಥಕ್ಕಳಿ, ಛಂಡೆವಾದ್ಯ, ಬಾಹುಬಲಿ ಯುದ್ಧದ ಸನ್ನಿವೇಶ, ಹುಲಿವೇಶ, ರತ್ನಾಕರ ವರ್ಣಿ, ವೀರಭದ್ರ ಕುಣಿತ, ಆದಿನಾಥ ಸ್ವಾಮಿ, ಗೇರು ಸಪ್ಪೆ ಬಸದಿ, ಕೋಲಾಟ, ಪೂಜಕುಣಿತ, ಸರ್ವಾಣಯಕ್ಷ, ಜೈನ ಕವಿಗಳು, ಬಾಹು ಬಲಿಸ್ವಾಮಿ, ಭದ್ರಬಾಹು ಗುಹೆ, ರಾಜ ವೈಭವ ಚತ್ರಿ, ಪಿಂಛಿ ಮಂದಿರ, ಪ್ರಭಾವನ ರಥಗಳು, ಗೊಮ್ಮಟ ಸಾರ ಹಾಗೂ ಚಿಲಿಪಿಲಿ ಗೊಂಬೆಗಳು ಸೇರಿದಂತೆ 200 ಕ್ಕೂ ಹೆಚ್ಚು ಕಲಾ ತಂಡಗಳು ಹಾಗೂ ಸುಮಾರು 7000 ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin