ಬೆಳ್ಳಿ ಪರದೆಗೆ ‘ಗೂಗಲ್’

ಈ ಸುದ್ದಿಯನ್ನು ಶೇರ್ ಮಾಡಿ

google-1

ಕನ್ನಡ ಸಿನಿಮಾ ಗೂಗಲ್ ಒಂದು ವಿನೂತನ ಕಥಾ ವಸ್ತು ಇಟ್ಟುಕೊಂಡು ಈ ವಾರ ಬಿಡುಗಡೆ ಆಗುತ್ತಿದೆ. ಡಾ ವಿ ನಾಗೇಂದ್ರ ಪ್ರಸಾದ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಟನೆ ಹಾಗೂ ನಿರ್ಮಾಣ ಸಹ ಮಾಡಿರುವ ಚಿತ್ರ. ಇದುವರೆಗೂ ತೆರೆಯ ಮೇಲೆ ಹೇಳದೇ ಇರುವ ವಸ್ತುವನ್ನೇ ಡಾ ವಿ ನಾಗೇಂದ್ರ ಪ್ರಸಾದ್ ಅವರು ತಂದಿದ್ದಾರಂತೆ. ಇದು 2000 ಇಸವಿಯಲ್ಲಿ ನಡೆದ ಘಟನೆ. ಅದರಲ್ಲಿ ನಾಗೇಂದ್ರ ಪ್ರಸಾದ್ ಸಹ ಜೊತೆಯಾಗಿದ್ದವರು. ಗೂಗಲ್ ಚಿತ್ರಕ್ಕೆ ಈ ಭೂಮಿ ಬಣ್ಣದ ಬುಗುರಿ ಎಂದು ಹೇಳಲಾಗಿದೆ. ಜೀವನದ ಹಲವಾರು ಮಗ್ಗಲುಗಳನ್ನು ಅವರು ಹೇಳುತ್ತಾ ಹೋಗುತ್ತಾರೆ. ನಾಗೇಂದ್ರ ಪ್ರಸಾದ್ ಜೋಡಿಯಾಗಿ ಚೆಲುವೆ ಶುಭ ಪೂಂಜಾ ಇದ್ದಾರೆ. ಬೇಬಿ ವೈಷ್ಣವಿ, ದೀಪಕ್, ಅಮೃತ ರಾವ್, ಶೋಭ್‍ರಾಜ್, ಸಂಪತ್, ಜೈ ದೇವ್, ಕೃಷ್ಣಮೂರ್ತಿ ತಾರಾಗಣದಲ್ಲಿ ಇದ್ದಾರೆ. ಉತ್ಸವ್ ಮೂವೀಸ್ ಅಡಿಯಲ್ಲಿ ನಾಗೇಂದ್ರ ಪ್ರಸಾದ್ ಅವರ ಜೊತೆಯಲ್ಲಿ ಹಣ ಹೂಡಿರುವವರು ಅಶ್ವಥ್ ಹಾಗೂ ಶ್ರೀಧರ್. ಕೆ ಎಂ ಪ್ರಕಾಶ್ ಸಂಕಲನ, ನಾಗರ್ಜುನ ಅವರ ಛಾಯಾಗ್ರಹಣ ಜೊತೆಗೆ ಇನ್ನಿತರ ತಂತ್ರಜ್ಞರಾಗಿ ರಘುವರ್ಧನ, ಉಪ್ಪಿ, ಕೋಟ ವೆಂಕಟೇಶ್, ಸತೀಶ್ ಬಾಬು, ಇಮ್ರಾನ್ ಸರ್ದಾರಿಯ, ಕಲೈ, ಹರಿಕೃಷ್ಣ, ಕಂಬಿ ರಾಜು, ಅನಿಲ್ ಸಿ ಜೆ ಹಾಗೂ ಇತರರು ಕಾರ್ಯ ನಿರ್ವಹಿಸಿದ್ದಾರೆ.

Facebook Comments

Sri Raghav

Admin