ಗ್ರೀನ್ ಎನರ್ಜಿ ಮೂಲಕ ದಕ್ಷಿಣ ಧ್ರುವಕ್ಕೆ ಟ್ರೆಕ್ಕಿಂಗ್ ಹೊರಟ ವಿಶ್ವದ ಮೊದಲಿಗರು ಯಾರು ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

spl

ಇದನ್ನು ತಂದೆ-ಮಗನ ಬಾಂಧವ್ಯದ ಅದ್ಭುತ ಹೊಂದಾಣಿಕೆ ಎನ್ನಬಹುದು… ಲಂಡನ್‍ನ ಹಿರಿಯ ಅನ್ವೇಷಕ ರಾಬರ್ಟ್ ಸ್ವಾನ್ ಮತ್ತು ಅವರ ಪುತ್ರ ಬಾರ್ನೆ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನವೀಕರಿಸಬಹುದಾದ ಇಂಧನದೊಂದಿಗೆ ಅಂಟಾಕ್ರ್ಟಿಕ್ ಚಾರಣ ಕೈಗೊಂಡಿದ್ದಾರೆ. ಗ್ರೀನ್ ಎನರ್ಜಿ ಮೂಲಕ ದಕ್ಷಿಣ ಧ್ರುವಕ್ಕೆ ಟ್ರೆಕ್ಕಿಂಗ್ ಹೊರಟ ವಿಶ್ವದ ಮೊದಲ ವ್ಯಕ್ತಿಗಳು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.  ಪರಿಸರ ಮಾಲಿನ್ಯ ರಕ್ಷಣೆಗಾಗಿ ಹಸಿರು ಇಂಧನ ಬಳಕೆ ಈಗ ಎಲ್ಲೆಡೆ ಬಹು ಚರ್ಚಿತ ವಿಷಯ. ಇದಕ್ಕಾಗಿ ಹೊಸ ಪ್ರಯೋಗಗಳೂ ಮುಂದುವರಿದಿವೆ. ಅತ್ಯಂತ ಪ್ರತಿಕೂಲ ಹವಾಮಾನದಲ್ಲೂ ನವೀಕರಿಸಬಹುದಾದ ಅಥವಾ ಪುನರ್ ಬಳಸಬಹುದಾದ ಇಂಧನ ಉಪಯೋಗಿಸಬಹುದು ಎಂಬುದನ್ನು ತಂದೆ ಮತ್ತು ಮಗ ಸಾಬೀತು ಮಾಡಲು ಹೊರಟಿದ್ದಾರೆ. ಇದು ಪಳಿಯುಳಿಕೆ ಇಂಧನಕ್ಕೆ ಪರ್ಯಾಯವಾಗಬಲ್ಲದು ಎಂಬುದು ಅವರ ಆಶಾಭಾವನೆ.

ಲಂಡನ್‍ನ 61 ವರ್ಷದ ಹಿರಿಯ ಸೌತ್ ಪೋಲ್ ಅನ್ವೇಷಕ ರಾಬರ್ಟ್ ಸ್ವಾನ್ ಮತ್ತು ಅವರ ಪುತ್ರ 23ರ ಪ್ರಾಯದ ಬಾರ್ನೆ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನವೀಕರಿಸಬಹುದಾದ ಇಂಧನದೊಂದಿಗೆ ಅಂಟಾಕ್ರ್ಟಿಕ್ ಹಿಮ ಪ್ರದೇಶಕ್ಕೆ ಸುದೀರ್ಘ ಚಾರಣ ಕೈಗೊಂಡಿದ್ದಾರೆ. ಗ್ರೀನ್ ಎನರ್ಜಿ ಮೂಲಕ ದಕ್ಷಿಣ ಧ್ರುವಕ್ಕೆ ಟ್ರೆಕ್ಕಿಂಗ್ ಹೊರಟ ಪ್ರಪಂಚದ ಪ್ರಥಮ ಚಾರಣಿಗರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ನಾನು ಮತ್ತು ಬಾರ್ನೆ ದಕ್ಷಿಣ ಧ್ರುವ ಪ್ರದೇಶಕ್ಕೆ 60 ದಿನಗಳ ಕಾಲ 600 ಮೈಲಿಗಳ ಚಾರಣ ಮಾಡುತ್ತಿದ್ದೇವೆ. ತಂದೆ ಮತ್ತು ಮಗ ಒಟ್ಟಿಗೆ ಅಂಟಾಕ್ರ್ಟಿಕ್‍ಗೆ ಹೋಗುತ್ತಿರುವುದು ವಿಶ್ವದಲ್ಲಿ ಇದೆ ಮೊದಲು ಹಾಗೂ ಇತಿಹಾಸದಲ್ಲಿ ಪ್ರಥಮ ಬಾರಿಗೆ ನವೀಕರಿಸಬಹುದಾದ ಇಂಧನವನ್ನು ನಾವು ಬಳಸುತ್ತಿದ್ದೇವೆ. ಈ ಪ್ರಯತ್ನವನ್ನು ಈವರೆಗೆ ಯಾರೂ ಮಾಡಿಲ್ಲ ಎನ್ನುತ್ತಾರೆ ರಾಬರ್ಟ್ ಸ್ವಾನ್. ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳೆರಡರಲ್ಲೂ ಚಾರಣ ಮಾಡಿದ ಮೊದಲ ಸಾಹಸಿ ಎಂಬ ಹೆಗ್ಗಳಿಕೆ ರಾಬರ್ಟ್ ಅವರದ್ದು.
ಇವರು ಹೊರಟಿರುವ ಮಾರ್ಗವು ದುರ್ಗಮ ಮತ್ತು ಅಪಾಯಕಾರಿ ಮಾರ್ಗ. ಹಿಮ ವ್ರಣ, ಎತ್ತರದ ಪ್ರದೇಶದಲ್ಲಿ ಕಂಡುಬರುವ ಅಸ್ವಸ್ಥತೆ ಮತ್ತು ಹಿಮ ಅಂಧತ್ವದಂಥ ಸಾಧ್ಯತೆ ಎದುರಿಸಿ ಮುನ್ನಡೆಯಬೇಕು. ಈ ಚಾರಣದ ವೇಳೆ ಬದುಕುಳಿಯಲು ಇವರು ಅತ್ಯಂತ ಸುಧಾರಿತ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಅವಲಂಬಿಸಿದ್ದಾರೆ.

ಈ ಸಾಹಸ ಯಾನಕ್ಕಾಗಿ ಅಪ್ಪ-ಮಗ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇವರ ಹಿಮ ಪಾದರಕ್ಷೆಗಳಿಗೆ ಮತ್ತು ಜಾರು ಹಲಗೆಗಳಿಗೆ ಸೌರ ಘಟಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಹಿಮವನ್ನು ಕರಿಗಿಸಿ ನೀರು ಕುಡಿಯಬಹುದು ಮತ್ತು ಅಡುಗೆ ಮಾಡಬಹುದು. ತಮ್ಮ ಈ ಚಾರಣವು ಯಾವುದೇ ಅಡಚಣೆ ಇಲ್ಲದೇ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವನ್ನು ರಾಬರ್ಟ್ ಮಗ ಬಾರ್ನೆ ಸ್ವಾನ್ ವ್ಯಕ್ತಪಡಿಸಿದ್ದಾನೆ.

Facebook Comments

Sri Raghav

Admin