ನೀರವ್ ಮೋದಿ ಪತ್ತೆಗೆ ಇಂಟರ್‍ಪೋಲ್‍ ಮೊರೆ ಹೋದ ಸಿಬಿಐ

ಈ ಸುದ್ದಿಯನ್ನು ಶೇರ್ ಮಾಡಿ

Neerav-Modi--02

ನವದೆಹಲಿ, ಫೆ.16-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಬಹು ಕೋಟಿ ರೂ. ವಂಚನೆ ಹಗರಣದಲ್ಲಿ ದೇಶದಿಂದ ಪರಾರಿಯಾಗಿರುವ ಕೋಟ್ಯಧಿಪತಿ ಆಭರಣ ವಿನ್ಯಾಸಕ ನೀರವ ಮೋದಿ ಮತ್ತು ಆತನ ಕುಟುಂಬವನ್ನು ಪತ್ತೆ ಮಾಡಲು ಕೇಂದ್ರೀಯ ತನಿಖಾ ದಳ-ಸಿಬಿಐ, ಇಂಟರ್‍ನ್ಯಾಷನಲ್ ಪೊಲೀಸ್(ಇಂಟರ್‍ಪೋಲ್) ನೆರವು ಕೋರಿದೆ.  ಇದೇ ವೇಳೆ ಜಾರಿ ನಿರ್ದೇಶನಾಲಯ(ಇಡಿ) ಪಿಎನ್‍ಬಿ ಬ್ಯಾಂಕ್ ಹಣ ದುರ್ಬಳಕೆ ಪ್ರಕರಣದ ಸಂಬಂಧ ನೀರವ್ ಮೋದಿ ಮತ್ತು ಉದ್ಯಮಿ ಮೆಹುಲ್ ಚೋಕ್ಸಿ ಅವರಿಗೆ ಸಮನ್ಸ್‍ಗಳನ್ನು ಜಾರಿಗೊಳಿಸಿದೆ.

ಪಿಎನ್‍ಬಿ ಬ್ಯಾಂಕ್ ಹಗರಣ ಬಯಲಾಗುವುದಕ್ಕೆ ಕೆಲವು ವಾರಗಳ ಮುನ್ನವೇ ಜನವರಿ ಮೊದಲ ವಾರದಿಂದ ದೇಶದಿಂದ ನೀರವ್ ಪರಾರಿಯಾಗಿದ್ದು, ನ್ಯೂಯಾರ್ಕ್‍ನ ಐಷಾರಾಮಿ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿಗಳಿವೆ.  ಈ ಹಿನ್ನೆಲೆಯಲ್ಲಿ ಇಂಟರ್‍ಪೋಲ್ ನೆರವು ಕೋರಿರುವ ಸಿಬಿಐ, ಇಂದು ಈ ಬಗ್ಗೆ ಸ್ಪಷ್ಟ ಮಾಹಿತಿ ಮತ್ತು ಸುಳಿವು ಲಭ್ಯವಾಗಲಿದೆ ಎಂಬ ವಿಶ್ವಾಸವನ್ನು ಸಿಬಿಐ ವ್ಯಕ್ತಪಡಿಸಿದೆ.

Facebook Comments

Sri Raghav

Admin