ಸಿದ್ದು ಕಣ್ಣು ಎಲೆಕ್ಷನ್ ಮ್ಯಾಲೆ…

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah---01

ಬೆಂಗಳೂರು, ಫೆ.16- ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ, ಮೃತ ರೈತರ 1 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿಗೆ ಒತ್ತು ನೀಡುವ, ಸರ್ವರನ್ನೂ ಸಮಾಧಾನಪಡಿಸುವ ಜನಪ್ರಿಯವಾದ 2018-19ನೆ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಂದು ಮಂಡಿಸಿದರು. ಮುಂದಿನ ವಿಧಾನಸಭಾ  ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜದ ಎಲ್ಲ ವರ್ಗದವರನ್ನು ಸಮಾಧಾನ ಪಡಿಸುವ ಕಸರತ್ತನ್ನು ನಡೆಸಿರುವ ಮುಖ್ಯ ಮಂತ್ರಿಗಳು ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. [ ಸಿದ್ದು ಲ್ಕೆಕ್ಕಾಚಾರ (Live) ]

ಕಳೆದ 5 ವರ್ಷಗಳ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ ಸಿದ್ದರಾಮಯ್ಯನವರು ಸಿಎಂ ಆಗಿ 6ನೇ ಮತ್ತು ಹಣಕಾಸು ಸಚಿವರಾಗಿ 13ನೆ ಮುಂಗಡಪತ್ರ ಮಂಡಿಸುತ್ತಿರುವುದಾಗಿ ಘೋಷಿಸಿದರು.  2018-19ನೇ ಸಾಲಿನಲ್ಲಿ 2,90,181 ಕೋಟಿ ರೂ. ಅಂದಾಜು ವೆಚ್ಚ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ ಮುಂದಿನ ಆರ್ಥಿಕ ಸಾಲಿಗೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿರುತ್ತದೆ ಎಂದು ಹೇಳಿದರು.
ರಾಜಸ್ವ ಹೆಚ್ಚುವರಿಯನ್ನು 127ಕೋಟಿ ರೂ.ನಿಂದ ಅಂದಾಜು ಮಾಡಲಾಗಿದ್ದು, ವಿತ್ತೀಯ ಕೊರತೆಯನ್ನು 35,127 ಕೋಟಿ ರೂ.ಗಳೆಂದು ನಿರೀಕ್ಷಿಸಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.49ರಷ್ಟಾಗಿರುತ್ತದೆ. ಮುಂದಿನ ಆರ್ಥಿಕ ಸಾಲಿನ ಅಂತ್ಯದಲ್ಲಿ 2,86,790 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಯು ರಾಜ್ಯದ ಆಂತರಿಕ ಉತ್ಪನ್ನದ ಶೇ.20.36ರಷ್ಟಾಗಿರುತ್ತದೆ ಎಂದು ಎಂದಾಜು ಮಾಡಲಾಗಿರುತ್ತದೆ ಎಂದರು.
ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವವನ್ನು 1,03,444 ಕೊಟಿ ರೂ.ಗಳಾಗಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 8,163 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 36,215 ಕೋಟಿ ರೂ.ಗಳನ್ನು ಹಾಗೂ ಸಹಾಯಧನ ರೂಪದಲ್ಲಿ ಕೇಂದ್ರ ಸರ್ಕಾರದಿಂದ 14,942 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದೆ ಎಂದು ಹೇಳಿದ್ದಾರೆ.  ಹಣಕಾಸು ಸಾಮಥ್ರ್ಯ ಮತ್ತು ಸ್ಪರ್ಶ ರಾಜಸ್ವಗಳ ಆಧಾರದ ಮೇಲೆ ಮಾಡಿದ ಸಾಲಗಳ ಮೂಲಕ 16,760 ಕೋಟಿ ರೂ.ಗಳನ್ನು ಕ್ರೋಢೀಕರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿ ಇಲಾಖೆಯ 5 ವರ್ಷಗಳ ಸಾಧನೆ ಬಣ್ಣಿಸಿ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ರಾಜ್ಯ ಸರ್ಕಾರಿ ನೌಕರರ ವೇತನ ಆಯೋಗದ ಶಿಫಾರಸಿನ ಅನುಷ್ಠಾನದಿಂದ ಉಂಟಾಗುವ ಹೊರೆಯನ್ನಷ್ಟೇ ಉಲ್ಲೇಖಿಸಿದ್ದು, ಖಚಿತ ನಿರ್ಧಾರ ಪ್ರಕಟಿಸಿಲ್ಲ.

ಎಲ್ಲ ವರ್ಗದ ರೈತರಿಗೆ ಅನ್ವಯವಾಗುವಂತೆ ಹನಿ ನೀರಾವರಿಗೆ ಶೇ.90ರಷ್ಟು ಸಹಾಯಧನ, ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಸಹಕಾರ ಸಂಘ ಸ್ಥಾಪನೆ, ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಕೃಷಿ ಸಾಲ ನೀಡಿಕೆ, ಖುಷ್ಕಿ ಭೂಮಿ ರೈತರ ನೆರವಿಗಾಗಿ ರೈತ ಬೆಳಕು ಎಂಬ ವಿಶಿಷ್ಟ ಯೋಜನೆಯನ್ನು ಪ್ರಕಟಿಸಿದ್ದಾರೆ.
ಹಾವು ಕಡಿತ ಹಾಗೂ ಆಕಸ್ಮಿಕ ಮರಣ ಹೊಂದಿದ ರೈತ ಹಾಗೂ ಕುಟುಂಬದವರಿಗೆ ಪರಿಹಾರ ಧನವನ್ನು ದ್ವಿಗುಣಗೊಳಿಸಿದ್ದಾರೆ. ಅಪರೂಪದ ಹಣ್ಣುಗಳಾದ ಲಿಚ್ಚಿ, ಆ್ಯಪರ್‍ಬರ್, ನೇರಳೆ, ಸ್ಟ್ರಾಬೆರಿ, ಸೀತಾಫಲ, ಸೀಬೆ ಬೆಳೆಗಳ ತಳಿ ಅಭಿವೃದ್ಧಿಗೆ ಉತ್ತೇಜನ ನೀಡಿದ್ದಾರೆ. ಐದು ವರ್ಷದ ಅವಧಿಗೆ ಅನ್ವಯವಾಗುವಂತೆ ರಾಜ್ಯ ಮೇವು ಭದ್ರತಾ ನೀತಿಯನ್ನು ರೂಪಿಸುವುದಾಗಿ ಪ್ರಸ್ತಾಪಿಸಿದ್ದಾರೆ.

ಕುರಿ, ಮೇಕೆ ಸಾಕಾಣಿಕೆದಾರರಿಗೆ ರಕ್ಷಣೆಗಾಗಿ ಟೆಂಟ್, ಕಬ್ಬಿಣದ ಬೇಲಿ ನಿರ್ಮಿಸಿಕೊಳ್ಳಲು 4 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದ್ದಾರೆ.
16 ಜಿಲ್ಲೆಗಳಲ್ಲಿ ಸುಸಜ್ಜಿತ ರೋಗ ತಪಾಸಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದು, ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೂ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪ ಮಾಡಿದ್ದಾರೆ. ಬೆಂಗಳೂರು-ಮೈಸೂರು ಕಾರಿಡಾರ್‍ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜಿಸಲಾಗಿದ್ದು, ಚನ್ನಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೈವ್ ಮ್ಯೂಸಿಯಂ ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ. ಕೃಷಿಪತ್ತಿನ ಸಹಕಾರ ಸಂಸ್ಥೆಗಳಲ್ಲಿ ಬೆಳೆಸಾಲ ಪಡೆದ ರೈತರು ನಿಧನರಾಗಿದ್ದರೆ, 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆ, ವಸತಿ ರಹಿತ 1 ಸಾವಿರ ಹಮಾಲರಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರಸ್ತಾಪ ಮಾಡಿದ್ದಾರೆ.

ಹಲವು ಏತ ನೀರಾವರಿ ಯೋಜನೆಗಳು ಸೇರಿದಂತೆ ಜಲ ಸಂಪನ್ಮೂಲ ಇಲಾಖೆಗೆ 15,998 ಕೋಟಿ ರೂ.ಗಳನ್ನು ಒದಗಿಸಲಾಗಿದೆ.  ಅಂತರ್ಜಲ ಅಭಿವೃದ್ಧಿಪಡಿಸಲು ಚೆಕ್‍ಡ್ಯಾಂಗಾಗಿ 50 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಪುನಶ್ಚೇತನಗೊಳಿಸಲು 10 ಕೋಟಿ ರೂ. ಒದಗಿಸಲಾಗಿದೆ. ವನ್ಯ ಪ್ರಾಣಿ ಹಾವಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ನೀಡಿರುವ 5 ಲಕ್ಷ ಪರಿಹಾರದ ಜತೆಗೆ 5 ವರ್ಷಗಳವರೆಗೆ 2 ಸಾವಿರ ಮಾಸಾಶನ ನೀಡುವ ಹೊಸ ಯೋಜನೆ ಪ್ರಕಟಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ

Facebook Comments

Sri Raghav

Admin