ಗಿನ್ನಿಸ್ ದಾಖಲೆ ಸೇರಿದ ವಿಶ್ವದ ಅತಿ ಉದ್ದದ ಕೇಬಲ್ ಕಾರ್

ಈ ಸುದ್ದಿಯನ್ನು ಶೇರ್ ಮಾಡಿ

da-3

ಇದು ದಾಖಲೆಗಳ ಯುಗ. ಹೊಸ ನೀರು ಬಂದು ಹಳೇ ನೀರು ಕೊಚ್ಚಿಕೊಂಡು ಹೋದಂತೆ ನವ ದಾಖಲೆಗಳು ಹಿಂದಿನವುಗಳನ್ನು ಅಳಿಸಿ ಹಾಕುತ್ತಿವೆ. ಬೊಲಿವಿಯಾದ ಅತಿ ಉದ್ದದ ಕೇಬಲ್ ಕಾರ್ ವ್ಯವಸ್ಥೆಯು ಈ ವರ್ಷದ ಗಿನ್ನಿಸ್ ವಿಶ್ವ ದಾಖಲೆ ಪುಟಗಳಲ್ಲಿ ಸ್ಥಾನ ಪಡೆದಿದೆ.  ಆಂಡೀಸ್ ಪರ್ವತಸ್ತೋಮದ ತಪ್ಪಲಿನಲ್ಲಿರುವ ಪುಟ್ಟ ರಾಷ್ಟ್ರ ಬೊಲಿವಿಯಾ ದೊಡ್ಡ ಸಾಧನೆ ಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದೆ. ಜಗತ್ತಿನ ಅತ್ಯಂತ ಉದ್ದದ ಕೇಬಲ್ ಕಾರ್ ವ್ಯವಸ್ಥೆ ಹೊಂದಿದ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

da-2

ರಾಜಧಾನಿ ಲಾ ಪಾಝ್ ಮತ್ತು ಎಲ್ ಅಲ್ಟೋ ನಡುವೆ ಸಂಪರ್ಕ ಕಲ್ಪಿಸುವ 30 ಕಿಲೋಮೀಟರ್ ಉದ್ದದ ಈ ಕೇಬಲ್ ಮಾರ್ಗ 2018ರ ಗಿನ್ನಿಸ್ ವಲ್ರ್ಡ್
ರೆಕಾಡ್ರ್ಸ್ ಬುಕ್‍ನಲ್ಲಿ ಸ್ಥಾನ ಗಿಟ್ಟಿಸಿದೆ. ಆಸ್ಟ್ರಿಯಾದ 23 ಕಿಲೋ ಮೀಟರ್‍ಗಳ ಕೇಬಲ್ ಕಾರ್ ಮಾರ್ಗವು ಅತ್ಯಂತ ಉದ್ದ ಎಂದು ಪರಿಗಣಿಸಲಾಗಿತ್ತು. ಈಗ ಆ ಸ್ಥಾನವನ್ನು ಬೊಲಿವಿಯಾ ಬಾಚಿಕೊಂಡಿದೆ.ಸರ್ಕಾರಿ ಒಡೆತನದ ಮೈ ಕೇಬಲ್ ಕಾರ್ ಎಂಬ ಕಂಪನಿ ಈ ದಾಖಲೆಯ ರೂವಾರಿ. 13,123 ಅಡಿಗಳ ಗರಿಷ್ಠ ಎತ್ತರದಲ್ಲಿ ಈ ಕೇಬಲ್ ಕಾರು ಚಲಿಸಲಿದೆ. 19 ಮೈಲಿಗಳ ಕೇಬಲ್ ಪಯಣ ನಯನ ಮನೋಹರ. ಆಂಡೀಸ್ ಪರ್ವತದ ವಿಹಂಗಮ ನೋಟ ವನ್ನು ಈ ರೋಚಕ ಯಾನದಲ್ಲಿ ಕಣ್ತುಂಬಿಕೊಳ್ಳ ಬಹುದು.

da-1

ವಿದ್ಯುತ್ ಚಾಲಿತ ಹಾಗೂ ಅತ್ಯಾಧುನಿಕ ಕೇಬಲ್ ಕಾರ್‍ನಲ್ಲಿ ವೈ ಫೈ ಸೌಲಭ್ಯವೂ ಲಭ್ಯ. ಈ ಕೇಬಲ್ ಕಾರ್ ಬೊಲಿವಿಯಾದ ಇತರ ಸಾರಿಗೆ ವ್ಯವಸ್ಥೆಯನ್ನು ಔಟ್‍ಡೇಟ್ ಮಾಡಿದೆ. ಈ ಕೇಬಲ್ ಕಾರುಗಳಲ್ಲಿ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ಮುಂದೆ ಲಕ್ಷಾಂತರ ಪ್ರಯಾಣಿಕರು ಇದರ ಸೌಲಭ್ಯ ಪಡೆಯುವ ನಿರೀಕ್ಷೆ ಇದೆ. ಈ ವ್ಯವಸ್ಥೆಯು ಲಾ ಪಾಝ್ ಮತ್ತು ಎಲ್ ಅಲ್ಟೋ ನಗರಗಳ ನಡುವೆ ಸಂಚಾರ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ಅತ್ಯಂತ ಮಹತ್ವದ್ದಾಗಿದೆ.

da

Facebook Comments

Sri Raghav

Admin