ಯಾತ್ರಾ ಸ್ಥಳಗಳಿಗೆ ವಿಶೇಷ ಪ್ಯಾಕೇಜ್ , ಕೆಎಸ್‍ಆರ್‍ಟಿಸಿ ಜೊತೆ ಕೆಎಸ್‍ಟಿಡಿಸಿ ಒಪ್ಪಂದ

ಈ ಸುದ್ದಿಯನ್ನು ಶೇರ್ ಮಾಡಿ

KSRTC

ಬೆಂಗಳೂರು, ಫೆ.17-ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈಗ ಕೆಎಸ್‍ಆರ್‍ಟಿಸಿ ಜೊತೆ ಕೈ ಜೋಡಿಸಿದ್ದು , ದೇಶ-ವಿದೇಶಿಯರು ಹಾಗೂ ಸ್ಥಳೀಯರಿಗೆ ಪ್ರವಾಸಿ ತಾಣಗಳನ್ನು ಪರಿಚಯಿಸುವ ಮತ್ತು ಉತ್ತೇಜಿಸುವ ವಿಶೇಷ ಪ್ರವಾಸ ಯೋಜನೆಯನ್ನು ರೂಪಿಸಿದೆ.  ಈ ಮೂಲಕ ಪ್ರವಾಸೋದ್ಯಮ ಪ್ರಚಾರ, ಪ್ಯಾಕೇಜ್ ಟೂರ್‍ಗಳ ಬಗ್ಗೆ ಮಾಹಿತಿ ತಲುಪಿಸಲು ಇದು ಸಹಕಾರಿಯಾಗಲಿದೆ.   ಇತ್ತೀಚೆಗೆ ಕೆಎಸ್‍ಟಿಡಿಸಿ ಮತ್ತು ಕೆಎಸ್‍ಆರ್‍ಟಿವಿ ಒಪ್ಪಂದ ಮಾಡಿಕೊಂಡಿದ್ದು , ಇದಕ್ಕಾಗಿ ಹೊಸ ಅಂತರ್ಜಾಲ ಆ್ಯಪ್(ಅವತಾರ್) ಕೂಡ ಬಿಡುಗಡೆ ಮಾಡಲಾಗಿದೆ.

www.kstdc.co ಮತ್ತು www.ksrtc.in ಮೂಲಕ ಪ್ರವಾಸಿ ತಾಣಗಳಿಗೆ ಆನ್‍ಲೈನ್‍ನಲ್ಲೂ ಸಾರ್ವಜನಿಕರು ಬುಕ್ ಮಾಡಬಹುದು. ಪ್ರಾಥಮಿಕವಾಗಿ 30 ಪ್ರವಾಸಿ ತಾಣಗಳ ಪ್ಯಾಕೇಜ್‍ನ್ನು ಪರಿಚಯಿಸಲಾಗಿದ್ದು , ಇದರಲ್ಲಿ ಯಾತ್ರಾ ಸ್ಥಳಗಳು ಇವೆ.  ಸುಖಕರ ಪ್ರಯಾಣ ಮತ್ತು ಕ್ಷೇತ್ರಗಳನ್ನು ಪರಿಚಯಿಸಲು ಗೈಡ್‍ಗಳು ಕೂಡ ಇರುತ್ತಾರೆ. ಶಿರಡಿ, ಜ್ಯೋತಿರ್ಲಿಂಗ ದರ್ಶನ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮೈಸೂರು, ಊಟಿಯಂತಹ ತಾಣಗಳು, ತಿರುಪತಿ ತಿರುಮಲ ವೆಂಟೇಶ್ವರನ ವಿಶೇಷ ದರ್ಶನಕ್ಕಾಗಿ ಪ್ರತಿದಿನ ನಾಲ್ಕು ಬಸ್‍ಗಳು ಕಾರ್ಯ ನಿರ್ವಹಿಸುತ್ತಿವೆ.
ಪ್ರವಾಸಿಗರಿಗೆ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ದರ್ಶನದ ವ್ಯವಸ್ಥೆಯನ್ನೂ ಕೂಡ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಲು ಕೆಎಸ್‍ಆರ್‍ಟಿಸಿ ಮತ್ತು ಕೆಎಸ್‍ಟಿಡಿಸಿ ನಡುವೆ ಮತ್ತಷ್ಟು ಕ್ರಿಯಾಶೀಲವಾಗಿ ಸೌಲಭ್ಯ ಒದಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin