ವಿಂಧ್ಯಗಿರಿಗೆ ಡೋಲಿಯಲ್ಲಿ ತೆರಳಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Mahamastakabhisheka--02

ಶ್ರವಣಬೆಳಗೊಳ, ಫೆ.17-ಗೊಮ್ಮಟ ನಗರದ ಮಹಾಮೂರ್ತಿ ಬಾಹುಬಲಿ ನೆಲೆಗೊಂಡಿರುವ ವಿಂಧ್ಯಗಿರಿ ಪರ್ವತಕ್ಕೆ ತೆರಳಲು ಮಾಡಲಾಗಿರುವ ವಿಶೇಷ ಡೋಲಿ ಸೌಕರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದರು. ಇಂದು ಪ್ರಥಮ ಮಸ್ತಕಾಭಿಷೇಕದ ಅಂಗವಾಗಿ ಅಹಿಂಸೆ, ತ್ಯಾಗದ ಪ್ರತೀಕವಾದ ಗೊಮ್ಮಟೇಶ್ವರನ ದರ್ಶನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಅಭಿಷೇಕದ ಸ್ಥಳಕ್ಕೆ ಡೋಲಿಯಲ್ಲಿ ತೆರಳಿದರು. ವಿರಾಟ ಮೂರ್ತಿಯ ಮಹಾಮಜ್ಜನಕ್ಕಾಗಿ ಅಟ್ಟಣಿಗೆಗಳನ್ನು ನಿರ್ಮಿಸಿರುವುದು ಸೇರಿದಂತೆ ಇನ್ನಿತರ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, 5 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಮಹಾಮಜ್ಜನದ ವಿಶೇಷ ಸಂದರ್ಭವನ್ನು ಸಾಕ್ಷೀಕರಿಸಲು ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.  ಡೋಲಿಯಲ್ಲಿ ತೆರಳಲು ಒಬ್ಬರಿಗೆ 1525 ರೂ. ಗಳನ್ನು ನಿಗದಿಪಡಿಸಲಾಗಿದೆ.

Facebook Comments

Sri Raghav

Admin