ಶಾಲಾ-ಕಾಲೇಜು ವ್ಯಾಪ್ತಿಗೂ ಇಂದಿರಾ ಕ್ಯಾಂಟಿನ್

ಈ ಸುದ್ದಿಯನ್ನು ಶೇರ್ ಮಾಡಿ

indira-canteen

ಬೆಂಗಳೂರು, ಫೆ.17- ನಗರದಲ್ಲಿರುವ ಶಾಲಾ- ಕಾಲೇಜುಗಳ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.  ಶಂಕರಮಠ ವಾರ್ಡ್‍ನ ಕಾವೇರಿ ನಗರದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಗರದಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾಗಿದ್ದು, ನಾಗರಿಕರು ಕ್ಯಾಂಟಿನ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವುದರಿಂದ ಈ ಯೋಜನೆಯನ್ನು ಶಾಲಾ-ಕಾಲೇಜುಗಳ ವ್ಯಾಪ್ತಿಗೂ ತರಲು ತೀರ್ಮಾನಿಸಲಾಗಿದೆ ಎಂದರು. ಮೇಯರ್ ಸಂಪತ್‍ರಾಜ್ ಮಾತನಾಡಿ, ರಾಜ್ಯ ಸರ್ಕಾರ ಹಸಿವು ಮುಕ್ತ ಬೆಂಗಳೂರು ಘೋಷಣೆಯಡಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಪಾಲಿಕೆ ಸದಸ್ಯ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಮಾತನಾಡಿ, ಈಗ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟಿನ್ ಪ್ರದೇಶ ಬೆಟ್ಟ-ಗುಡ್ಡಗಳಿಂದ ಕೂಡಿದ ಪ್ರದೇಶವಾಗಿತ್ತು. ಸತತ ಪರಿಶ್ರಮದಿಂದ ಸ್ಥಳವನ್ನು ಸ್ವಚ್ಛಮಾಡಿ ಪಾರ್ಕ್ ನಿರ್ಮಿಸುವುದರ ಜತೆಗೆ ಇಂದಿರಾ ಕ್ಯಾಂಟಿನ್ ಸ್ಥಾಪನೆ ಮಾಡಬೇಕಾಯಿತು. ಅದರಿಂದ ಕ್ಯಾಂಟಿನ್ ಲೋಕಾರ್ಪಣೆ ತಡವಾಯಿತು ಎಂದರು. ಈ ಕ್ಯಾಂಟಿನ್ ಸುತ್ತಮುತ್ತ ಹಿರಿಯ ನಾಗರಿಕರು ಮತ್ತು ಮಕ್ಕಳು ಕುಳಿತು ಉಪಹಾರ ಸೇವಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.  ಶಾಸಕ ಕೆ.ಗೋಪಾಲಯ್ಯ, ಬಿಬಿಎಂಪಿ ಸದಸ್ಯರಾದ ಕೇಶವಮೂರ್ತಿ, ಭದ್ರೇಗೌಡ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin