ಸುಗಂಧಗಳಿಂದ ಸೌಂದರ್ಯದ ಜೊತೆಗೆ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳೋದು ಹೇಗೆ ..?

ಈ ಸುದ್ದಿಯನ್ನು ಶೇರ್ ಮಾಡಿ

life-style-final-1

ಸುಗಂಧಗಳನ್ನು ಸಾಮಾನ್ಯವಾಗಿ ಸೌಂದರ್ಯವರ್ಧಕಗಳನ್ನಾಗಿ ಬಳಸುವುದು ತಿಳಿದಿದೆ. ಆದರೆ ಈಗ ಸೌಂದರ್ಯವರ್ಧಕ ಸುಗಂಧಗಳನ್ನು ಆರೋಗ್ಯ ವೃದ್ಧಿಸಿಕೊಳ್ಳಲು ಬಳಸಬಹುದೆಂಬ ರಹಸ್ಯ ನಿಮಗೆ ಗೊತ್ತಾ..? ಕೆಲವು ಸುಗಂಧಗಳನ್ನು ಆರೋಗ್ಯ ವೃದ್ದಿಗೆ ಹೇಗೆ ಬಳಸಬಹುದು, ಆ ಸುಗಂಧ ದ್ರವ್ಯಗಳು ಯಾವುವು..? ಎಂಬ ಸುದ್ದಿ ಇಲ್ಲಿದೆ ನೋಡಿ.

ಶೀತ, ನೆಗಡಿ ಮತ್ತು ಕಟ್ಟಿದ ಮೂಗಿನಿಂದ ಉಪಶಮನ ಪಡೆಯಲು ಬಿಸಿ ನೀರಿಗೆ 6-8 ಹನಿಗಳಷ್ಟು ನೀಲಗಿರಿ ಅಥವಾ ಪೈನ್‍ತೈಲವನ್ನು ಸೇರಿಸಿ ಹಬೆ ಸೇವಿಸಬಹುದು. ಸುಗಂಧತೈಲವನ್ನು ಉಷ್ಣ ಮತ್ತು ಶೀತ ಎರಡನ್ನೂ ಕುಗ್ಗಿಸುವಿಕೆಗಾಗಿ ಉಪಯೋಗಿಸಬಹುದು. ತರಚಿದ ಗಾಯಗಳಾಗಿದ್ದರೆ, ತಣ್ಣೀರಿನಲ್ಲಿ ಲ್ಯಾವೆಂಡರ್ ಬಳಸಬಹುದು. ತಲೆನೋವಿನಿಂದ ಮುಕ್ತಿ ಪಡೆಯಲು ತಣ್ಣೀರಿನಲ್ಲಿ ಪೆಪ್ಪರ್‍ಮಿಂಟ್‍ ಅಥವಾ ಲ್ಯಾವೆಂಡರ್‍ ಉಪಯೋಗಿಸಬಹುದು. ಮೊಡವೆಗಳು ಮತ್ತು ಗುಳ್ಳೆಗಳ ಉಪಶಮನಕ್ಕೆ ಬಿಸಿ ನೀರಿನಲ್ಲಿ ಶ್ರೀಗಂಧ ಬಳಕೆ ಪರಿಣಾಮಕಾರಿ. ಬಿಸಿ ನೀರಿನಲ್ಲಿ ರೋಸ್, ಲ್ಯಾವೆಂಡರ್ ಬಳಸುವುದರಿಂದ ಹುಳುಕು ಮತ್ತು ಮುಟ್ಟಿನಿಂದಾಗುವ ನೋವಿನಿಂದ ಉಪಶಮನ ಪಡೆಯಬಹುದು.

ರೋಸ್ ವಾಟರ್‍ ತಯಾರಿಸಲು ಎಣ್ಣೆ ಬಳಸಬಹುದು. ಒಂದು ಲೀಟರ್ ಮಿನರಲ್ ವಾಟರ್ ಖರೀದಿಸಿ ಅದಕ್ಕೆ ರೋಸ್‍ ಆಯಿಲ್ 6-8 ಹನಿ ಹಾಗೂ ಅರ್ಧ ಚಮಚ ಗ್ಲಿಸರಿನ್ ಸೇರಿಸಿ ಅದನ್ನು ಬಳಸುವಾಗ ಪ್ರತಿ ಬಾರಿ ಚೆನ್ನಾಗಿ ಅಲ್ಲಾಡಿಸಬೇಕು. ಕ್ರಿಮಿ-ಕೀಟಗಳು ಕಚ್ಚಿದಾಗ ಅಥವಾ ಸುಟ್ಟ ಗಾಯಗಳಾದಾಗ ಲ್ಯಾವೆಂಡರ್‍ ತೈಲವನ್ನು ನೇರವಾಗಿ ಲೇಪಿಸಬಹುದು.  ಸೆಡಾರ್‍ವುಡ್ (ದೇವದಾರು ಮರ) ತೈಲವು ನಿಮ್ಮ ಉಲ್ಲನ್ ವಸ್ತ್ರಗಳ ಮತ್ತು ಪುಸ್ತಕರಗಳಿಂದ ನುಸಿ, ಹುಳು ಹುಪ್ಪಟೆ, ಸಿಲ್ವರ್ ಫಿಶ್‍ನನ್ನು ದೂರವಿಡುತ್ತದೆ. ಜೆರೇನಿಯಂ ತೈಲದೊಂದಿಗೆ ಯಾವುದೇ ಮಿನರಲ್‍ ಆಯಿಲ್‍ನನ್ನು ಮಿಶ್ರಣ ಮಾಡಿದೇಹದತೆರೆದ ಭಾಗಕ್ಕೆ ಹಚ್ಚುವುದರಿಂದ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ.

ಚಹಾ ಗಿಡತುಂಬಾ ಶಕ್ತಿಯುತ ಅಂಟು ಜಾಡ್ಯ ನಿವಾರಕ. ಒಂದು ಬಕೆಟ್ ನೀರಿಗೆ ಕೇವಲ ಒಂದು ಹನಿ ಸಾಕು. ಅದುಚೆನ್ನಾಗಿ ಕೆಲಸ ಮಾಡುತ್ತದೆ. ನಿಮ್ಮ ಚರ್ಮ ಮತ್ತು ಕೂದಲಿನ ಆರೈಕೆಯಲ್ಲೂ ಸಹ ಸುಗಂಧ ಚಿಕಿತ್ಸೆ ಪರಿಣಾಮಕಾರಿ.

Facebook Comments

Sri Raghav

Admin