ಇರಾನ್‍ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 50 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Iran--01
ಟೆಹ್ರಾನ್, ಫೆ.18-ಇರಾನ್‍ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 50 ಮಂದಿ ಸಾವಿಗೀಡಾಗಿದ್ದಾರೆ. ರಾಜಧಾನಿ ಟೆಹ್ರಾನ್‍ನಿಂದ ಯಾಸೌಜ್‍ಗೆ ತೆರಳುತ್ತಿದ್ದ ಈ ವಿಮಾನ ಇಸ್‍ಫಹಾನ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಯಿತು ಎಂದು ವರದಿ ತಿಳಿಸಿದೆ.  ಈ ದುರ್ಘಟನೆಯಲ್ಲಿ ಸಿಬ್ಬಂದಿ ಸೇರಿದಂತೆ 50 ಮಂದಿ ದುರಂತ ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. 60 ಜನರ ಸಾಮಥ್ರ್ಯದ ವಿಮಾನ ಟೆಹ್ರಾನ್‍ನಿಂದ ಮೇಲೇರಿದ ಕೆಲವು ನಿಮಿಷಗಳ ನಂತರ ರೇಡರ್‍ನಿಂದ ಕಣ್ಮರೆಯಾಯಿತು. ಅದಾದ ಕೆಲವು ನಿಮಿಷಗಳ ನಂತರ ಅಪಘಾತಕ್ಕೀಡಾಯಿತು. ಈ ದುರಂತಕ್ಕೆ ಕಾರಣಗಳು ತಿಳಿದುಬಂದಿಲ್ಲ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.   ಕಳೆದ ನಾಲ್ಕು ದಿನಗಳ ಹಿಂದೆ ರಷ್ಯಾದ ರಾಜಧಾನಿ ಮಾಸ್ಕೋ ಹೊರವಲಯದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಎಲ್ಲ 71 ಮೃತಪಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin