ಕೆನಡಾ ಪ್ರಧಾನಿಯ ಭಾರತ ಪ್ರವಾಸ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Cananda-PM

ನವದೆಹಲಿ, ಫೆ.18-ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡಿಯಾವು ಒಂದು ವಾರದ ಭೇಟಿಗಾಗಿ ಭಾರತದಲ್ಲಿ ಆಗಮಿಸಿದ್ದಾರೆ. ತಮ್ಮ ಆಪ್ತಮಿತ್ರ ನರೇಂದ್ರ ಮೋದಿ ಆಹ್ವಾನದ ಮೇರೆಗೆ ತಮ್ಮ ಪತ್ನಿ ಸೋಫೀ ಗ್ರೆಗೋರೆ ಮತ್ತು ಮಕ್ಕಳಾದ ಕ್ಷೇವಿಯರ್(10), ಎಲ್ಲಾ-ಗ್ರೇಸ್(9) ಮತ್ತು ಹ್ಯಾಡ್ರೀನ್(3) ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ನಿನ್ನೆ ರಾತ್ರಿ ನವದೆಹಲಿಗೆ ಆಗಮಿಸಿದರು.  ವಿದೇಶಾಂಗ ವ್ಯವಹಾರಗಳ ಸಚಿ ಕ್ರಿಸ್ಟಿಯಾ ಫ್ರೀಲ್ಯಾಂಡ್, ವಿಜ್ಞಾನ  ಮತ್ತು ಆರ್ಥಿಕ ಅಭಿವೃದ್ದಿ ಸಚಿವ ನವದೀಪ್ ಬೈನ್ಸ್, ರಕ್ಷಣಾ ಸಚಿವ ಹರ್ಜಿತ್ ಸಜ್ಜನ್, ಕ್ರೀಡಾ ಸಚಿವ್ ಕ್ರಿಸ್ಟಿ ಡುನ್‍ಕಾನ್, ಮತ್ತು ಮೂಲಸೌಕರ್ಯಾಭಿವೃದ್ದಿ ಸಚಿವ ಅಮರ್‍ಜೀತ್ ಸೊಹಿ ಸಹ ಕೆನಡಾ ಪ್ರಧಾನಿ ನಿಯೋಗದಲ್ಲಿದ್ದಾರೆ.  ಕೆನಡಾ ಪ್ರಧಾನಿ ಅವರು ಏಳು ದಿನಗಳ ಭಾರತ ಪ್ರವಾಸದ ವೇಳೆ ಹಲವು ಮುಖಂಡರು ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆ ಕುರಿತು ಮಹತ್ವದ ಒಪ್ಪಂದಗಳಿಗೆ ಸಹಿ ಮಾಡುವರು.

Facebook Comments

Sri Raghav

Admin