ನಾಳೆ ಗುಜರಾತ್ ನಗರ ಪಾಲಿಕೆ ಚುನಾವಣೆ ಫಲಿತಾಂಶ

ಈ ಸುದ್ದಿಯನ್ನು ಶೇರ್ ಮಾಡಿ

Voting--01

ಅಹಮದಾಬಾದ್, ಫೆ.18-ಗುಜರಾತ್‍ನ 75 ನಗರ ಪಾಲಿಕೆಗಳಿಗೆ ನಿನ್ನೆ ನಡೆದ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಗೆ ಅಗ್ನಿ ಪರೀಕ್ಷೆಯಾಗಿದೆ. ನಿನ್ನೆ ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ನಡೆದ ಚುನಾವಣೆ ಶಾಂತಿಯುತವಾಗಿತ್ತು. ದಹೋಡ್ ವಾರ್ಡ್‍ನಲ್ಲಿ ಶೇ.76.67ರಷ್ಟು ಭರ್ಜರಿ ಮತದಾನವಾಗಿದ್ದರೆ, ರಾಜಕೋಟ್‍ನಲ್ಲಿ ಶೇ.50.17ರಷ್ಟು ಅತಿ ಕಡಿಮೆ ಪ್ರಮಾಣ ದಾಖಲಾಗಿತ್ತು.
ಎರಡು ಜಿಲ್ಲಾ ಪಂಚಾಯಿತಿಗಳು, 17 ತಾಲ್ಲೂಕು ಪಂಚಾಯಿತಿಗಳು ಹಾಗೂ 1,400 ಗ್ರಾಮ ಪಂಚಾಯಿತಿಗಳಿಗೂ ಸಹ ನಿನ್ನೆ ಮತದಾನ ನಡೆದಿದೆ. ಪಾಲಿಕೆ ಮತ್ತು ಪಂಚಾಯಿತಿಗಳ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ.

2016ರಲ್ಲಿ ಒಟ್ಟು 123 ಸ್ಥಾನಗಳಲ್ಲಿ 107ರಲ್ಲಿ ಜಯಿಸಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ ಸಾಧಿಸಿದ್ದ ಬಿಜೆಪಿ ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. 522 ಮುನ್ಸಿಪಲ್ ವಾರ್ಡ್‍ಗಳು ಮತ್ತು 1,988 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ ಒಟ್ಟು 2763 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.

Facebook Comments

Sri Raghav

Admin