ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಅಪರಿಚಿತ ಮಹಿಳೆ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Yashwantpur

ಬೆಂಗಳೂರು, ಫೆ.18-ಯಶವಂತಪುರ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಜಾಗದಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.   ಸುಮಾರು 50 ವರ್ಷದ ಮಹಿಳೆ ದಡೂತಿ ದೇಹ ಹೊಂದಿದ್ದು, ನೈಟಿ ಧರಿಸಿದ್ದಾರೆ. ಅಗಲವಾದ ಕಿವಿ ಹಾಗೂ ಎರಡು ಕೈಗಳ ಮೇಲೆ ರಂಗೋಲಿಯ ಅಚ್ಚೆ ಇದೆ. ಶವವನ್ನು ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದ್ದು, ವಾರಸುದಾರರ ಪತ್ತೆಗೆ ಯಶವಂತಪುರ ರೈಲ್ವೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin