ಬ್ರುಸ್ಸೆಲ್ಸ್’ನ ಅಟೋಮಿಯಂ ಸ್ವಚ್ಚತಾ ಕಾರ್ಯದಲ್ಲಿ ಎಂಟೆದೆ ಕಾರ್ಮಿಕರ ಸಾಹಸ..!

ಈ ಸುದ್ದಿಯನ್ನು ಶೇರ್ ಮಾಡಿ

ds-1

ಬ್ರುಸ್ಸೆಲ್ಸ್‍ನ ಆಟೋಮಿಯಂ ಗಗನಚುಂಬಿ ಗೋಪುರ ಬೆಲ್ಜಿಯಂನ ಹೆಗ್ಗುರುತು. ಈ ಮುಗಿಲೆತ್ತರದ ವಿನ್ಯಾಸವನ್ನು ಸ್ವಚ್ಛಗೊಳಿಸುವುದು ಒಂದು ಸಾಹಸದ ಕೆಲಸ. ಇದಕ್ಕೆ ಎಂಟೆದೆ ಬೇಕು. ವರ್ಷಕ್ಕೊಮ್ಮೆ ಇದನ್ನು ಸ್ವಚ್ಛಗೊಳಿಸಲು ಸಾಹಸಿ ಕಾರ್ಮಿಕರ ತಂಡವೊಂದು ಕಾರ್ಯೋನ್ಮುಖವಾಗುತ್ತದೆ. ಬುಸ್ರೆಲ್ಸ್‍ನ ಆಟೋಮಿಯಂ ಆ ನಗರದ ಪ್ರತಿಷ್ಠೆಯ ಸಂಕೇತ. ವಿಶಿಷ್ಟ ವಿನ್ಯಾಸ ಹೊಂದಿರುವ ಈ ಮುಗಿಲೆತ್ತರದ ಗೋಪುರವನ್ನು ವರ್ಷಕ್ಕೊಮ್ಮೆ ಸ್ವಚ್ಚಗೊಳಿಸಲಾಗುತ್ತದೆ. ಈ ಗಗನಚುಂಬಿ ಕಟ್ಟಡಕ್ಕೆ ಮುಂದಿನ ವರ್ಷ 60ನೇ ಹುಟ್ಟುಹಬ್ಬ. ಹೀಗಾಗಿ ಅದನ್ನು ಸ್ವಚ್ಚಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ds

ಈ ಗೋಪುರ  ತಲಾ 18 ಮೀಟರ್ ವ್ಯಾಸದ ಉಕ್ಕಿನ ಏಳು ಗೋಳಾಕಾರದ ವಿನ್ಯಾಸಗಳನ್ನು ಹೊಂದಿದ್ದು, ಅವು ಪರಸ್ಪರ ಬೆಸೆದು ಕೊಂಡಿವೆ. ಅತ್ಯಂತ ಎತ್ತರದ ಈ ವಿನ್ಯಾಸವನ್ನು ಸ್ವಚ್ಚಗೊಳಿಸುವುದು ಸುಲಭದ ಮಾತಲ್ಲ. ಇದಕ್ಕೆ ತುಂಬಾ ಧೈರ್ಯ ಬೇಕು. ಇದಕ್ಕಾಗಿ ಎಂಟೆದೆ ಭಂಟರಂತಿರುವ ಸಾಹಸಿ ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ. ಇವರು ಒಂದು ರೀತಿಯ ಪರ್ವತಾರೋಹಿಗಳಂತೆ ಕಟ್ಟಡ ಏರಿ ಸ್ವಚ್ಚತಾ ಕಾರ್ಯದಲ್ಲಿ ತೊಡಗುತ್ತಾರೆ. ಈ ತಂಡದ ಕಾರ್ಮಿಕರು ಇಂಥ ಅಪಾಯಕಾರಿ ಸ್ವಚ್ಚತಾ ಕಾರ್ಯಗಳಲ್ಲಿ ಪಳಗಿದವರು.

ds-2

ಕಟ್ಟಡವನ್ನು ಲೀಲಾಜಾಲವಾಗಿ ಏರಿ ಜೀವದ ಹಂಗು ತೊರೆದು ಸ್ವಚ್ಚಗೊಳಿಸುತ್ತಾರೆ. ಈ ತಂಡದ ನಾಯಕ ಆಲಿವರ್ ಡೆಲೆಕೋಸ್ಸೆ. ಈತ ತನ್ನ ನಾಲ್ವರು ಸಹಾಯಕರೊಂದಿಗೆ ಎರಡುವಾರಗಳ ಕಾಲ ಶ್ರಮಿಸಿ ಆಕಾಶಚುಂಬಿ ಗೋಪುರವನ್ನು ಸ್ವಚ್ಚಗೊಳಿಸುತ್ತಾರೆ. ಇವರ ಧೈರ್ಯ ಮತ್ತು ಸಾಹಸ ಮೆಚ್ಚುವಂಥದ್ದು.

Facebook Comments

Sri Raghav

Admin