ರಾಜಸ್ತಾನದಲ್ಲಿ ಸಿಲಿಂಡರ್ ಸ್ಪೋಟಗೊಂಡು ಮೃತಪಟ್ಟವರ ಸಂಖ್ಯೆ 19ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rajastan--01

ಜೈಪುರ್, ಫೆ.19-ರಾಜಸ್ತಾನದ ಅಜ್ಮೀರ್ ಜಿಲ್ಲೆಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೃತರ ಸಂಖ್ಯೆ 19ಕ್ಕೇರಿದೆ. ಸ್ಫೋಟದಿಂದ ಉರುಳಿ ಬಿದ್ಧ ಎರಡು ಅಂತಸ್ತುಗಳ ಭಗ್ನಾವಶೇಷದ ಅಡಿ ನಿನ್ನೆ ಇನ್ನೂ 10 ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿದೆ. ಅಜ್ಮೀರ್ ಜಿಲ್ಲೆಯ ಕುಮಾವತ್ ಭವನದಲ್ಲಿ ಶುಕ್ರವಾರ ರಾತ್ರಿ ಅವಳಿ ಸಿಲಿಂಡರ್ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಎರಡು ಅಂತಸ್ತುಗಳ ಕಟ್ಟಡ ಧ್ವಂಸವಾಗಿತ್ತು. ಒಂಭತ್ತು ಮಂದಿ ಮೃತಪಟ್ಟು, ಅನೇಕರು ನಾಪತ್ತೆಯಾಗಿದ್ದರು. ಘಟನೆ ನಂತರ ತೀವ್ರ ಶೋಧ ಮುಂದುವರಿಸಿದ ರಕ್ಷಣಾ ಸಿಬ್ಬಂದಿಗೆ ನಿನ್ನೆ ಇನ್ನೂ 10 ಶವಗಳು ಪತ್ತೆಯಾದವು. ಇದರೊಂದಿಗೆ ಮೃತರ ಸಂಖ್ಯೆ 19ಕ್ಕೇರಿದೆ. ಸಭೆ ಸಮಾರಂಭಗಳು ನಡೆಯುವ ಈ ಸ್ಥಳದಲ್ಲಿ ಸಿಲಿಂಡರ್‍ಗಳಿಗೆ ಅಕ್ರಮವಾಗಿ ಅನಿಲಗಳನ್ನು ತುಂಬಿಸಲಾಗುತ್ತಿತ್ತು ಎಂದು ಹೇಳಲಾಗಿದ್ದು, ತನಿಖೆ ಮುಂದುವರಿದಿದೆ.

Facebook Comments

Sri Raghav

Admin