ಸರ್ಕಾರಿ ಗೌರವಗಳೊಂದಿಗೆ ಸಿಯಾಚಿನ್‍ನಲ್ಲಿ ಮೃತಪಟ್ಟಿದ್ದ ಯೋಧನ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Soldite-Kallappa

ವಿಜಯಪುರ,ಫೆ.19-ಇಂದು ಸ್ವಗ್ರಾಮಕ್ಕೆ ಆಗಮಿಸಿದ ಸಿಯಾಚಿನ್‍ನಲ್ಲಿ ಮೃತಪಟ್ಟಿದ್ದ ಯೋಧ ಕಾಶಿನಾಥ ಕಲ್ಲಪ್ಪ ತಳವಾರ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಬೆಳಗ್ಗೆನಿಂದಲೇ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಪಾರ್ಥೀವ ಶರೀರವನ್ನು ಕಂಡ ಕುಟುಂಬಸ್ಥರು, ಬಂಧುಗಳ ರೋಧನ ಮುಗಿಲುಮುಟ್ಟಿತ್ತು. ಸ್ವಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ನಂತರ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಸೂಚಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಿಲ್ಲೆಯ ಉತ್ನಾಳ ಗ್ರಾಮದ ಕಾಶಿನಾಥ ಕಲ್ಲಪ್ಪ ತಳವಾರ ಅವರ ಪಾರ್ಥೀವ ಶರೀರ ಇಂದು ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದಾಗ ಯುವಕರು ಬೈಕ್ ರ್ಯಾಲಿ ಮೂಲಕ ಬರಮಾಡಿಕೊಂಡರು.

Facebook Comments

Sri Raghav

Admin