ಸಿಗಂದೂರು ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Niting-gadkari

ಸಾಗರ. ಫೆ. 19 : ಕೇಂದ್ರ ಸರ್ಕಾರದ ನೆರವಿನಲ್ಲಿ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಮತ್ತು 7,000 ಕೋಟಿಗೂ ಅಧಿಕ ಮೊತ್ತದ ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥೀಕರಣ ಕಾಮಗಾರಿಗಳಿಗೆ ಕಾಮಗಾರಿಗಳಿಗೆ ಕೇಂದ್ರ ಭೂಸಾರಿಗೆ ಸಚಿವರಾದ ಸನ್ಮಾನ್ಯ ನಿತಿನ್ ಗಡ್ಕರಿಯವರು ಚಾಲನೆ ನೀಡಿದರು. ಸಿಗಂದೂರು ಸೇತುವೆ ನಿರ್ಮಾಣಕ್ಕಾಗಿ ಮಾನ್ಯ ಯಡಿಯೂರಪ್ಪನವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಶ್ರೀ ಗಡ್ಕರಿಯವರು ಅನುಮೋದನೆ ನೀಡಿರುವುದು ಈ ಭಾಗದ ಜನತೆಯಲ್ಲಿ ಅತೀವ ಸಂತಸವನ್ನು ತಂದಿದೆ. ಇದರಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ. ಈ ಜನೋಪಕಾರಿ ಕಾರ್ಯದಿಂದ ಕರ್ನಾಟಕದ ಪರಿವರ್ತನೆಗೆ ತಾವು ಬದ್ಧರಾಗಿದ್ದೇವೆಂಬ ಸಂದೇಶವನ್ನು ಮಾನ್ಯ ಯಡಿಯೂರಪ್ಪನವರು ನೀಡಿದ್ದಾರೆ. ಮುಖಂಡರುಗಳಾದ ಶ್ರೀ ಕಾಗೋಡು ತಿಮ್ಮಪ್ಪ, ಶ್ರೀ ಬಿ.ವೈ.ರಾಘವೇಂದ್ರ, ಶ್ರೀ ರುದ್ರೇ ಗೌಡ, ಶ್ರೀ ಆಯನೂರು ಮಂಜುನಾಥ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin