ಕಾರು-ಟ್ರಕ್ ನಡುವೆ ಡಿಕ್ಕಿ, ಬಿಜೆಪಿ ಶಾಸಕ ಸೇರಿ ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

MAL-Accident
ಲಕ್ನೋ,ಫೆ.21- ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಿಜೆಪಿ ಶಾಸಕ ಲೋಕೇಂದ್ರ ಸಿಂಗ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‍ನ ನೂರ್ಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಲೋಕೇಂದ್ರ ಸಿಂಗ್ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರು ತಮ್ಮ ಟೊಯೋಟಾ ಫಾರ್ಚೂನರ್ ವಾಹನದಲ್ಲಿ ತೆರಳಿದ್ದರು.  ಇಲ್ಲಿನ ಸಿತಾಪುರ್‍ನಲ್ಲಿ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಶಾಸಕರ ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಅಂಗರಕ್ಷಕರು ಇದ್ದರೆಂದು ಅಂತ ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಇನ್ನು ಮೃತ ಶಾಸಕ ಲೋಕೇಂದ್ರ ಸಿಂಗ್ ಬಿಜ್ನೋರ್ ಜಿಲ್ಲೆಯ ನೂರ್‍ಪುರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Facebook Comments

Sri Raghav

Admin