ನಿಮ್ಮನ್ನು ಪ್ರೇರೇಪಿಸಲಿದೆ ಲಂಡನ್ನಿನ ಮಾನವ ಕುದುರೆ ರೇಸ್

ಈ ಸುದ್ದಿಯನ್ನು ಶೇರ್ ಮಾಡಿ

rece

ಇಂಗ್ಲೆಂಡ್ ರಾಜಧಾನಿ ಲಂಡನ್ ಭಿನ್ನ-ವಿಭಿನ್ನ ಸ್ಪರ್ಧೆಗಳಿಗೆ ಪ್ರಸಿದ್ಧ. ಇಲ್ಲಿ ಪ್ರತಿ ವರ್ಷ ಅಸಾಧಾರಣ ರೇಸ್ ನಡೆಯುತ್ತದೆ. ಇದಕ್ಕೆ ಲಂಡನ್ ಪ್ಯಾಂಟೊಮೈಮ್ ಹಾರ್ಸ್ ರೇಸ್ ಎಂಬ ಹೆಸರಿದೆ. ಹಾಗಾದರೆ ಇದರ ವಿಶೇಷತೆ ಏನು..? ನೀವೇ ನೋಡಿ…! ಕ್ರಿಸ್ಮಸ್ ಸಂದರ್ಭದಲ್ಲಿ ಲಂಡನ್‍ನಲ್ಲಿ ನಡೆಯುವ ಫ್ಯಾಂಟೊಮೈಮ್ ಹಾರ್ಸ್ ರೇಸ್ ಬಹು ಪ್ರಸಿದ್ಧ. ಲಂಡನ್ ವಾಸಿಗಳು ಕುದುರೆಯಂತೆ ವೇಷಭೂಷಣ ತೋಟು ಬೀದಿಗಳಲ್ಲಿ ಓಡುತ್ತಾರೆ. ಈ ದೃಶ್ಯಗಳು ನಮ್ಮ ಜನಪದ ಕೀಲು ಕುದುರೆಗಳನ್ನು ನೆನಪಿಸುತ್ತವೆ.

race-1

ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಈ ಅಣುಕು ಕುದುರೆ ರೇಸ್ ಸಂಪ್ರದಾಯಿಕ ಬ್ರಿಟಿಷ್ ಕ್ರಿಸ್ಮಸ್ ಸಂಕೇತವೂ ಹೌದು. ಕುದುರೆ ಅಥವಾ ಹಸುವನ್ನು ಹೋಲುವ ವೇಷ-ಭೂಷಣ ಧರಿಸಿ 20 ಜೋಡಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ರಸ್ತೆಗಳ ಮೂಲಕ ಕಾಲು ಮೈಲಿ ದೂರದ ಸ್ಪರ್ಧೆಯಲ್ಲಿ ಓಡುತ್ತಾ ಮಧ್ಯೆ ಮಧ್ಯೆ ಪಬ್‍ಗಳ ಮುಂದೆ ನಿಂತು ಪಾನಗೋಷ್ಠಿ ನಡೆಸಿದರು. ಕುದುರೆ ವೇಷಧಾರಿಗಳು ಇಬ್ಬರನ್ನು ಒಳಗೊಂಡಿದ್ದು, ಒಬ್ಬರು ತಲೆಯ ಭಾಗ ಹಾಗೂ ಮತ್ತೊಬ್ಬರು ದೇಹದ ಪ್ರತಿರೂಪದ ಮೂಲಕ ಗಮನ ಸೆಳೆದರು.

race-3 race-2

Facebook Comments

Sri Raghav

Admin