23ರಂದು ಬಾರುಕೋಲು ಹಿಡಿದು ಸಂಸತ್‍ಗೆ ಮುತ್ತಿಗೆ ಹಾಕಲು ಮುಂದಾದ ರೈತರ

ಈ ಸುದ್ದಿಯನ್ನು ಶೇರ್ ಮಾಡಿ

Formers-Protestತಿಪಟೂರು, ಫೆ.21- ರಾಜ್ಯದ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಸಮಗ್ರ ನೀರಾವರಿ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಿ ಇದೇ 23ರಂದು ದೆಹಲಿಯ ಜಂತರ್ ಮಂತರ್‍ನಿಂದ ಬಾರುಕೋಲು ಮುಖಾಂತರ ಸಂಸತ್ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಹೊಸಹಳ್ಳಿ ಚಂದ್ರಣ್ಣ ಬಣದ ) ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದ್ದಾರೆ. ನಗರದ ರೈಲ್ವೆ ನಿಲ್ದಾಣದಲ್ಲಿ ದೆಹಲಿಗೆ ತೆರಳುವ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗೆ ನ್ಯಾಯ ದೊರಕುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ. ದೇಶದಲ್ಲಿ ಅತೀ ಹೆಚ್ಚಿನ ಶೋಷಣಗೆ ಒಳಗಾಗಿರುವುದು ರೈತರು ಅಂತಹವರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಲಿ ಯಾವುದೇ ರೀತಿಯ ಗಮನವನ್ನು ನೀಡುತ್ತಿಲ್ಲ. ಜೊತೆಗೆ ರೈತರಿಗಾಗಿ ಯಾವುದೇ ನೂತನ ಯೋಜನೆಗಳನ್ನು ಜಾರಿಗೊಳಿಸದೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದರು.

ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿ ಮಾಡಬೇಕಾದಂತಹ ಕೇಂದ್ರ ಸರ್ಕಾರ ಯಾವುದೇ ಕಾರ್ಯಗಳನ್ನು ಮಾಡದೇ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಕನಿಷ್ಠ ಜೀವನ ನಿರ್ವಹಣೆಯ ಅವಶ್ಯಕ ವಸ್ತುಗಳ ಬೆಲೆ, ಪೆಟ್ರೋಲ್-ಡಿಸೇಲ್ ಬೆಲೆಗಳು ಗಗನಕ್ಕೆ ತಲುಪಿದ್ದು , ಜೀವನ ನಿರ್ವಹಣ ಕಷ್ಟಸಾಧ್ಯವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಾ ಮನ್ನಾ, ಅಗತ್ಯವಸ್ತುಗಳ ಬೆಲೆ ಕಡಿಮೆಮಾಡಬೇಕು ಹಾಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ರೈತ ಮುಖಂಡ ಗೊರಗೊಂಡನಹಳ್ಳಿ ರಾಜಶೇಖರ್, ಸಂಘದ ಉಪಾಧ್ಯಕ್ಷ ಕರಿಯಪ್ಪ, ಬೀರಲಿಂಗಯ್ಯ, ಹುಳಿಯಾರಪ್ಪ, ಪುಟ್ಟಯ್ಯ, ರಾಮಚಂದ್ರ, ಕೆಂಪಲಿಂಗಯ್ಯ, ಸೈಯದ್ ಅಹಮದ್, ವಸಮತ ಕುಮಾರ್, ಈಶ್ವರಪ್ಪ, ತಿಮ್ಮಯ್ಯ, ಜಯರಾಂ, ಪುಷ್ಪಾಬಾಯಿ, ರತ್ನಮ್ಮ, ಲಕ್ಷ್ಮೀ ಸೇರಿದಂತೆ ಮತ್ತಿತರರಿದ್ದರು.

Facebook Comments

Sri Raghav

Admin