ಜಿಎಸ್‍ಟಿ ತೆರಿಗೆ ಏರುಪೇರುಗಳ ನಡುವೆಯೂ ಆರ್ಥಿಕ ಸ್ಥಿತಿ ಸ್ಥಿರ : ಕೃಷ್ಣ ಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

krishnabaire-gowda

ಬೆಂಗಳೂರು,ಫೆ.22-ಕರ್ನಾಟಕದಲ್ಲಿ ಸತತವಾಗಿ ತೆರಿಗೆ ಆದಾಯ ಶೇ.15ರಷ್ಟು ವೃದ್ಧಿಯಾಗಿದೆ. ಜಿಎಸ್‍ಟಿಯಿಂದ ತೆರಿಗೆ ಏರುಪೇರುಗಳ ನಡುವೆಯೂ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ವಿಧಾನಪರಿಷತ್‍ನಲ್ಲಿ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ರಮೇಶ್‍ಬಾಬು ಅವರ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಹಾಗೂ ಬಂಡವಾಳ ಆಸ್ತಿ ಸೃಜಿಸಲು ಸಾಲವನ್ನು ಪಡೆಯುತ್ತದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಅನ್ವಯ ಜಿಎಸ್‍ಜಿಪಿಗೆ ವಿತ್ತೀಯ ಕೊರತೆ ಶೇ.3ರಷ್ಟು ಮಿತಿಯೊಳಗೆ ಶೇ.25ರಷ್ಟು ಸಾಲವನ್ನು ಪಡೆಯಲು ಇರುವ ಮಾನದಂಡ ಅನುಸರಿಸಿಯೇ ಸಾಲವನ್ನು ಪಡೆಯಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಒಟ್ಟು ರಾಜಸ್ವದಲ್ಲಿ ಸ್ವಂತ ತೆರಿಗೆ ರಾಜಸ್ವ, ಸ್ವಂತ ತೆರಿಗೇತರ ರಾಜಸ್ವ, ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ, ಕೇಂದ್ರ ಸರ್ಕಾರದ ಸಹಾಯಧನ ಮೂಲಗಳನ್ನು ಒಳಗೊಂಡಿರುತ್ತದೆ. ಪ್ರತಿ ವರ್ಷ ಶೇ.97ರಷ್ಟನ್ನು ವೆಚ್ಚ ಮಾಡಿರುವುದರಲ್ಲಿ ರಾಜ್ಯ ಸರ್ಕಾರ ಪ್ರಥಮವಾಗಿದೆ. ಬೇರೆ ರಾಜ್ಯ ಸರ್ಕಾರಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ ಎಂದು ಹೇಳಿದರು. ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಜತೆಗೆ ವಾಣಿಜ್ಯ ತೆರಿಗೆ, ಅಬಕಾರಿ, ಮೋಟರ್ ವಾಹನ ತೆರಿಗೆ, ಮುದ್ರಾಂಕ ನಾಲ್ಕು ಪ್ರಮುಖ ರಾಜ್ಯ ತೆರಿಗೆಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ರಾಜಸ್ವದ ಗುರಿ 89957 ಕೋಟಿ ರೂ.ಗಳಾಗಿದ್ದು , ಡಿಸೆಂಬರ್ ಅಂತ್ಯಕ್ಕೆ 63876 ಕೋಟಿ ತೆರಿಗೆ ಸಂಗ್ರಹವಾಗಿರುತ್ತದೆ. ಆಯವ್ಯಯ ಅಂದಾಜುಗಳ ಶೇ.71ರಷ್ಟು ಪ್ರಮಾಣದ ಗುರಿ ಸಾಧಿಸಲಾಗಿದೆ ಎಂದು ಹೇಳಿದರು. 2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಮೂಲಕ 31908 ಕೋಟಿ ನಿರೀಕ್ಷಿಸಲಾಗಿದ್ದು, ಡಿಸೆಂಬ್ ಅಂತ್ಯಕ್ಕೆ 20479 ಕೋಟಿ ಸ್ವೀಕೃತವಾಗಿದೆ. ಅಂದಾಜಿಸಿದ ಮೊತ್ತದಲ್ಲಿ ಶೇ.64ರಷ್ಟು ಮೊತ್ತ ಬಂದಿದೆ ಎಂದು ತಿಳಿಸಿದರು.

2017-18ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಸಹಾಯಧನದ ಮೂಲಕ 16082 ಕೋಟಿ ರೂ.ಗಳು ಬರುವುದೆಂದು ಅಂದಾಜಿಸಲಾಗಿದ್ದು , ಡಿಸೆಂಬರ್ ಅಂತ್ಯಕ್ಕೆ 15334 ಕೋಟಿ ರೂ. ಸ್ವೀಕೃತವಾಗಿದೆ. ಅಂದಾಜಿಸಿದ ಮೊತ್ತದಲ್ಲಿ ಶೇ.95ರಷ್ಟು ಮೊತ್ತ ಬಂದಿದೆ. 2017-18ನೇ ಸಾಲಿನಿಂದ ಯೋಜನೆ ಮತ್ತು ಯೋಜನೆಯೇತರ ಭಿನ್ನತೆಯನ್ನು ತೆಗೆದು ಹಾಕಲಾಗಿದ್ದು , ಡಿಸೆಂಬರ್ 17ರ ಅಂತ್ಯಕ್ಕೆ ಶೇ.63ರ ವೆಚ್ಚದ ಪ್ರಗತಿಯನ್ನು ಸಾಧಿಸಲಾಗಿದೆ. ಇದರಲ್ಲಿ ಅಭಿವೃದ್ದಿ ವೆಚ್ಚದ ಪಾಲು ಮೂರು ಪಟ್ಟು ಇದೆ. ಕಳೆದ 5 ವರ್ಷಗಳಿಂದ ತೆರಿಗೆ ಪ್ರಮಾಣ ಕಡಿಮೆಯಾಗಿಲ್ಲ. ವಿದೇಶಿ ನೆರವಿನ ಬಂಡವಾಳ ಯೋಜನೆಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ವಿವರಿಸಿದರು.

Facebook Comments

Sri Raghav

Admin