ನಕಲಿ ಚೆಕ್ ನೀಡಿ ಬ್ಯಾಂಕ್‍ಗೆ ವಂಚಿಸಲು ಯತ್ನಿಸಿದ ನಾಲ್ವರು ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Jail
ಬೆಳಗಾವಿ, ಫೆ.22-ನಕಲಿ ಚೆಕ್ ನೀಡಿ 2.72 ಕೋಟಿ ರೂ. ವಂಚನೆಗ ಯತ್ನಿಸಿದ್ದ ನಾಲ್ವರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಶಿಧರ್ ನಾಗನೂರ, ನಾರಾಯಣಶೆಟ್ಟಿ, ಮಹಮ್ಮದ್‍ಗೌಸ್ ಆರೀಫ್ ಮತ್ತು ಪಾಟೀಲ್ ಬಂಧಿತ ಆರೋಪಿಯಾಗಿದ್ದು, ಇವರಿಂದ ಕಾರು, 15 ಮೊಬೈಲ್ ಹಾಗೂ ನಕಲಿ ಚೆಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹನುಮಾನ್ ನಗರದ ಎಸ್‍ಬಿಐ ಶಾಖೆಗೆ ಗ್ರಾಮೀಣ ರೋಜ್‍ಗಾರ್ ಯೋಜನೆ ಸಮಿತಿ ಹೆಸರಿನಲ್ಲಿ 2,72,00138 ರೂ. ನಮೂದಿಸಿ ನಕಲಿ ಚೆಕ್ ನೀಡಿದ್ದರು.

ಲೋಗಾನ್ ಮಾರ್ಕೆಟಿಂಗ್ ಹೆಸರಿನಲ್ಲಿ ಈ ನಕಲಿ ಚೆಕ್ಕನ್ನು ಎಸ್‍ಬಿಐ ಶಾಖೆಗೆ ನೀಡಿ ಈ ಹಣ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಲು ಮತ್ತೊಂದು ನಕಲಿ ಚೆಕ್‍ನ್ನು ಆರೋಪಿಗಳು ನೀಡಿದ್ದರು. ಈ ವೇಳೆ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಂಚಕರು ಉತ್ತರ ಪ್ರದೇಶ ಸರ್ಕಾರದ ಹೆಸರಿನಲ್ಲಿ ನಕಲಿ ಚೆಕ್ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ವರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin