ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ ವಿಧೇಯಕ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

Kagodu-Timmappa----01

ಬೆಂಗಳೂರು,ಫೆ.22-ಕರ್ನಾಟಕ ಭೂ ಕಂದಾಯ ವಿಧೇಯಕ(ತಿದ್ದುಪಡಿ) 2018 ಹಾಗೂ ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ವಿಧೇಯಕ 2018ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಕೆಲವು ಭೂಮಿಗಳ ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸಲು ನಿಗದಿಪಡಿಸುವ ಅಂತಿಮ ಗಡುವನ್ನು ವಿಸ್ತರಿಸಲು ಅವಕಾಶ ನೀಡುವ ಭೂಕಂದಾಯ ತಿದ್ದುಪಡಿ ವಿಧೇಯಕವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ  ಮಂಡಿಸಿದರು.

ಅರ್ಥಶಾಸ್ತ್ರ, ಶೈಕ್ಷಣಿಕ ಸಂಶೋಧನೆ, ಸಮಾಲೋಚನಾ ವೈಚಾರಿಕ ವೇದಿಕೆ ತರಬೇತಿ ಮತ್ತು ಜ್ಞಾನ ಪ್ರಸಾರಗಳನ್ನು ವಿಸ್ತರಿಸಲು ಅವಕಾಶ ನೀಡುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಸ್ಥಾಪಿಸುವ ವಿಧೇಯಕವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಮಂಡಿಸಿದರು.

Facebook Comments

Sri Raghav

Admin