ಆನ್‍ಲೈನ್ ಮೂಲಕ ಶಾಲಾ-ಕಾಲೇಜುಗಳ ಅನುದಾನ ನವೀಕರಣ

ಈ ಸುದ್ದಿಯನ್ನು ಶೇರ್ ಮಾಡಿ

tanveer
ಬೆಂಗಳೂರು, ಫೆ.23-ಖಾಸಗಿ ಶಾಲಾ-ಕಾಲೇಜುಗಳ ಅನುದಾನ ನವೀಕರಣ ಸಂದರ್ಭದಲ್ಲಿ ಆಗುವ ಅನಗತ್ಯ ಕಿರಿಕಿರಿ ತಪ್ಪಿಸಲು ಆನ್‍ಲೈನ್ ಮೂಲಕ ನವೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಪರಿಷತ್‍ಗೆ ತಿಳಿಸಿದರು.  ಪ್ರಶ್ನೋತ್ತರ ಕಲಾಪದಲ್ಲಿ ಎಸ್.ವಿ.ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 15 ವರ್ಷ ಮೇಲ್ಪಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹಲವು ಷರತ್ತುಗಳೊಂದಿಗೆ ಅನುದಾನಕ್ಕೊಳಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಐದು ವರ್ಷಗಳಿಂದ ಅನುದಾನಿತ ಶಾಲಾ-ಕಾಲೇಜುಗಳ ನವೀಕರಣ ಸಂದರ್ಭದಲ್ಲಿ ಸಾಕಷ್ಟು ಕಿರಿಕಿರಿಯಾಗುತ್ತಿದೆ ಎಂಬ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದನ್ನು ತಪ್ಪಿಸಲು ಆನ್‍ಲೈನ್ ಮೂಲಕ ನವೀಕರಣ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು. 3547 ಕಾಲೇಜುಗಳಲ್ಲಿ 2584 ಕಾಲೇಜುಗಳು ನವೀಕರಣಗೊಂಡಿವೆ. 383 ಕಾಲೇಜುಗಳು ತಟಸ್ಥವಾಗಿವೆ. 180 ಕಾಲೇಜುಗಳು ಅನುಮೋದನೆಗೆ ಹೊಸ ಸಂಯೋಜನೆ ಮಾಡಿಕೊಂಡಿರುವುದರಿಂದ ತಡೆಹಿಡಿಯಲಾಗಿದೆ ಎಂದು ಅವರು ಹೇಳಿದರು. ಆಡಳಿತ ಮಂಡಳಿ ವ್ಯಾಜ್ಯ, ಉಪನ್ಯಾಸಕರ ಸಮಸ್ಯೆ ಮುಂತಾದವುಗಳು ಎದುರಾದರೆ ಸರ್ಕಾರ ಮಧ್ಯಪ್ರವೇಶಿಸಲಿದೆ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

Facebook Comments

Sri Raghav

Admin