ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಯಾರು ದುರ್ಜನರನ್ನು ಅಮೃತವನ್ನು ಹರಿಸತಕ್ಕ ಒಳ್ಳೆಯ ಮಾತುಗಳಿಂದ ಸಜ್ಜನರ ದಾರಿಯಲ್ಲಿ ಒಯ್ಯಲು ಇಷ್ಟಪಡುತ್ತಾನೋ, ಅವನು ಘೋರ ಸರ್ಪವನ್ನು ಎಳೆಯ ಕಮಲನಾಳದ ನಾರುಗಳಿಂದ ಕಟ್ಟಬಹುದು; ಅಥವಾ ವಜ್ರಮಣಿಗಳನ್ನು ಬಾಗೇಹೂವಿನ ಕೊನೆಯಿಂದ ಕತ್ತರಿಸಬಹುದು; ಅಥವಾ ಉಪ್ಪು ಸಮುದ್ರವನ್ನು ಒಂದು ತೊಟ್ಟು ಜೇನುತುಪ್ಪದಿಂದ ಸಿಹಿ ಮಾಡಬಹುದು.

ಪಂಚಾಂಗ : ಶುಕ್ರವಾರ 23.02.2018

ಸೂರ್ಯ ಉದಯ ಬೆ.06.39 / ಸೂರ್ಯ ಅಸ್ತ ಸಂ.06.28
ಚಂದ್ರ ಅಸ್ತ ರಾ.1.03 / ಚಂದ್ರ ಉದಯ ಬೆ.11.57
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು /ಫಾಲ್ಗುಣ ಮಾಸ
ಶುಕ್ಲ ಪಕ್ಷ /ತಿಥಿ : ಅಷ್ಠಮಿ (ರಾ.12.44)
ನಕ್ಷತ್ರ: ಕೃತ್ತಿಕಾ (ಮ.12.43) ಯೋಗ: ಇಂದ್ರ-ವೈಧೃತಿ (ಬೆ.6.32-ರಾ.3.52)
ಕರಣ: ಭದ್ರೆ-ಭವ (ಮ.1.39-ರಾ.12.44) / ಮಳೆ ನಕ್ಷತ್ರ: ಶತಭಿಷಾ
ಮಾಸ: ಕುಂಭ / ತೇದಿ: 11

ಇಂದಿನ ವಿಶೇಷ:

ರಾಶಿ ಭವಿಷ್ಯ :

ಮೇಷ: ಕಷ್ಟದಲ್ಲಿರುವವರಿಗೆ ನೆರವಾಗುವಿರಿ
ವೃಷಭ: ಅನಿರೀಕ್ಷಿತ ಪ್ರಯಾಣ ಒತ್ತಡ ಮತ್ತು ಉದ್ವೇಗಭರಿತವೂ ಆಗಿರುತ್ತದೆ.
ಮಿಥುನ: ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿಯಲಿದೆ.
ಕರ್ಕ: ಸಹದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯಗಳು ಉದ್ಭವಿಸಲಿದೆ.
ಸಿಂಹ: ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.
ಕನ್ಯಾ: ನಿಮ್ಮ ಅಸಭ್ಯ ವರ್ತನೆ ಹಾನಿಯುಂಟುಮಾಡುತ್ತದೆ. ಸೌಜನ್ಯದ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು.
ತುಲಾ: ಒಂದು ಅದ್ಭುತ ಸಂಜೆ ಆಯೋಜಿಸಲಿದ್ದೀರಿ.
ವೃಶ್ಚಿಕ: ಎಲ್ಲಾ ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡಿ.
ಧನುರ್: ಸರಿಯಾದ ಸಮಾಲೋಚನೆಯಿಂದ ನಷ್ಟದಿಂದ ಪಾರು
ಕುಂಭ: ಪ್ರಬಲ ಪಾಲುದಾರರನ್ನು ಆಕರ್ಷಿಸಲಿದ್ದೀರಿ.
ಮಕರ: ಹೊರನೋಟದ ಸುಧಾರಣೆಗೆ ಹೆಚ್ಚು ಖರ್ಚು
ಮೀನ: ಹಣಕಾಸಿನ ವ್ಯವಹಾರಗಳಲ್ಲಿ ಗಡಿಬಿಡಿಯ ನಿರ್ಧಾರ ಸಲ್ಲದು.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin