ಕವಲು ದಾರಿಯಲ್ಲಿ ಗಣಿ ಧಣಿ ರೆಡ್ಡಿ ರಾಜಕೀಯ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

 

Janardhan-Reddy
ಬೆಂಗಳೂರು,ಫೆ.23-ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅತ್ತ ಬಿಡದಂತೆಯೂ ಇಲ್ಲ. ಇತ್ತ ಸೇರಿಸಿಕೊಳ್ಳುವಂತೆಯೂ ಇಲ್ಲ. ಬಿಟ್ಟರೂ ಪಕ್ಷಕ್ಕೆ ಹಾನಿ. ಬಿಡದಿದ್ದರೂ ಪಕ್ಷಕ್ಕೆ ನಷ್ಟ ಎನ್ನುವಂತಿದೆ ಸದ್ಯದ ಪರಿಸ್ಥಿತಿ. ಹೀಗಾಗಿ ರಾಜ್ಯ ನಾಯಕರು ಮತ್ತು ವರಿಷ್ಠರು ಯಾವುದೇ ತೀರ್ಮಾನ ಕೈಗೊಳ್ಳದೆ ಅಡಕತ್ತರಿಗೆ ಸಿಲುಕಿದ್ದಾರೆ. ಒಂದು ಕಾಲದಲ್ಲಿ ರಾಜ್ಯ ರಾಜಕಾರಣವನ್ನೇ ತನ್ನ ಕಪಿಮುಷ್ಟಿ ಯಲ್ಲೇ ಇಟ್ಟುಕೊಂಡು ಅಕ್ರಮ ಗಣಿಗಾರಿಕೆ ಮೂಲಕ ಜೈಲು ಪಾಲಾದ ಬಳ್ಳಾರಿ ಗಣಿಧಣಿ ಜನಾರ್ಧನ ರೆಡ್ಡಿಯ ಸದ್ಯದ ರಾಜಕೀಯ ಪರಿಸ್ಥಿತಿ ಕವಲು ದಾರಿಯಲ್ಲಿದೆ.

ಮಾತೃ ಪಕ್ಷಕ್ಕೆ ರೆಡ್ಡಿ ಬರಬೇಕೆಂದು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಮ್ಮದೇ ಆದ ರಣತಂತ್ರವನ್ನು ರೂಪಿಸುತ್ತಿದ್ದಾರೆ.  ಆದರೆ ಜನಾರ್ಧನ ರೆಡ್ಡಿಯನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕೆ ಬೇಡವೇ ಎಂಬ ಇಕ್ಕಟ್ಟಿನಲ್ಲಿ ಬಿಜೆಪಿ ನಾಯಕರು ಇದ್ದಾರೆ. ತೆಗೆದುಕೊಂಡರೆ ಭ್ರಷ್ಟಾಚಾರದ ಆರೋಪ ಹೊತ್ತ ಕಳಂಕಿತನನ್ನು ಪಕ್ಷ ಸೇರ್ಪಡೆ ಮಾಡಿಕೊಂಡ ಮುಜುಗರಕ್ಕೆ ಸಿಲುಕ ಬೇಕಾಗುತ್ತದೆ ಎಂಬ ಅಳಕು ಬಹುತೇಕರದ್ದು.  ತೆಗೆದುಕೊಳ್ಳದಿದ್ದರೆ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಕೊಪ್ಪಳ, ಗದಗ ಮತ್ತಿತರ ಕಡೆ ಸುಮಾರು 20ರಿಂದ 30 ವಿಧಾನಸಭಾ ಕ್ಷೇತ್ರಗಳ ಮೇಲೆ ರೆಡ್ಡಿ ಪ್ರಭಾವ ಪಕ್ಷಕ್ಕೆ ಹಾನಿ ಮಾಡ ಬಹುದೆಂಬ ಭೀತಿಯೂ ಕಾಡುತ್ತಿದೆ.

ಈಗಾಗಲೇ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಗಡಿ ಭಾಗದ ತೋಟವೊಂದರಲ್ಲಿ ಮನೆ ಮಾಡಿರುವ ಜನಾರ್ಧನ ರೆಡ್ಡಿ ಪಕ್ಷದ ಗೆಲುವಿಗಾಗಿ ತಮ್ಮದೇ ರಣತಂತ್ರ ರೂಪಿಸುತ್ತಿದ್ದಾರೆ. ಆದರೆ ಪಕ್ಷದ ಪರ ಪ್ರಚಾರ ನಡೆಸುವಂತೆ ಇಲ್ಲವೇ ಯಾವುದೇ ಜವಾಬ್ದಾರಿ ನೋಡಿಕೊಳ್ಳುವಂತೆ ವರಿಷ್ಠರಿಂದ ಈವರೆಗೂ ಜನಾರ್ದನ ರೆಡ್ಡಿಗೆ ಅನುಮತಿ ಸಿಕ್ಕಿಲ್ಲ ಮುಂದೊಂದು ದಿನ ಪಕ್ಷ ತಮ್ಮನ್ನು ಪರಿಗಣಿಸಬಹುದೆಂಬ ವಿಶ್ವಾಸ ದಿಂದಲೇ ರೆಡ್ಡಿ ಅಖಾಡಕ್ಕಿಳಿದಿದ್ದಾರೆ.
ರೆಡ್ಡಿಗೆ ಅನಿವಾರ್ಯ: ಅಂದಹಾಗೆ ಬಿಜೆಪಿಯಲ್ಲಿ ಗುರುತಿಸಿಕೊಳ್ಳುವುದು ಜರ್ನಾರ್ಧನ ರೆಡ್ಡಿಗೆ ಅನಿವಾರ್ಯವಾಗಿದೆ. ಸಾಲು ಸಾಲು ಮೈಮೇಲಿ ರುವ ಪ್ರಕರಣಗಳು, ಎಸ್‍ಐಟಿ ಭೂತ ಯಾವುದೇ ವೇಳೆ ಅವರನ್ನು ಮತ್ತೆ ಶ್ರೀ ಕೃಷ್ಣನ ಜನ್ಮಸ್ಥಳಕ್ಕೆ ಕರೆದೊಯ್ಯಬಹುದು. ಹೀಗಾಗಿ ರೆಡ್ಡಿಗೆ ಯಾವುದಾದರೂ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಕಾಂಗ್ರೆಸ್ ಬಾಗಿಲು ಮುಚ್ಚಿದೆ. ಇನ್ನು ಜೆಡಿಎಸ್‍ಗೂ ರೆಡ್ಡಿ ಸಂಸ್ಕøತಿಗೂ ಹಾವು-ಮುಂಗುಸಿ ಇದ್ದಂತೆ. ಏನೇ ಆಗಲಿ ಮಾತೃ ಪಕ್ಷ ಬಿಜೆಪಿಯಲ್ಲೇ ಕೊನೆಯುಸಿರಿರುವವರೆಗೂ ಹೋರಾಟ ನಡೆಸಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಂತಹ ಪ್ರಭಾವಿ ನಾಯಕರನ್ನು ಎದುರು ಹಾಕಿ ಕೊಳ್ಳುವ ಪರಿಸ್ಥಿತಿಯಲ್ಲಿ ರೆಡ್ಡಿ ಇಲ್ಲ. ಏನೇ ಆದರೂ ಸರಿ ಬಿಜೆಪಿಯಲ್ಲೇ ಮತ್ತೊಮ್ಮೆ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದಾರೆ.

ಬಿಜೆಪಿ ಕತೆಯೂ ಇದೇ: ಇನ್ನು ಬಿಜೆಪಿ ಕತೆಯೂ ಕೂಡ ರೆಡ್ಡಿಗಿಂತ ಭಿನ್ನವಾಗಿಲ್ಲ. ಮಿಷನ್-150 ಎಂದು ರಾಜ್ಯ ನಾಯಕರು ಅಬ್ಬರಿಸುತ್ತಿದ್ದರೂ ವಾಸ್ತವ ಪರಿಸ್ಥಿತಿಗೆ ಸಾಕಷ್ಟು ವ್ಯತ್ಯಾಸ ಕಾಣಿಸುತ್ತಿದೆ.  ಯಾರು ಏನೇ ಅಂದರೂ ರೆಡ್ಡಿ ಮತ್ತು ಅವರ ಪಟಾಲಂ ಈಗಲೂ ಬಳ್ಳಾರಿ, ರಾಯಚೂರು, ಕೊಪ್ಪಳ , ಗದಗ ಸೇರಿದಂತೆ ಸುಮಾರು 20ರಿಂದ 30 ವಿಧಾನಸಭಾ ಕ್ಷೇತ್ರಗಳ ಮೇಲೆ ಒಂದಿಷ್ಟು ಪ್ರಭಾವ ಹೊಂದಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಒಂದೊಂದು ಸ್ಥಾನಗಳು ನಿರ್ಣಾಯಕ ಪಾತ್ರ ವಹಿಸಲಿರುವುದರಿಂದ ರೆಡ್ಡಿಯನ್ನು ಕಡೆಗಣಿಸದೆ ತೆರೆಮರೆಯಲ್ಲಿ ಎಲ್ಲ ರೀತಿಯ ಸಹಕಾರ ನೀಡು ವಂತೆ ಕೇಂದ್ರದ ನಾಯಕರೊಬ್ಬರು ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಸೂಚನೆ ಮೇರೆಗೆ ರೆಡ್ಡಿ ಮೊಳಕಾಲ್ಮೂರಿನ ಹೊರವಲಯದಲ್ಲಿ ಮನೆ ಮಾಡಿಕೊಂಡಿದ್ದಾರೆ. ಗುರು ವಾರವಷ್ಟೇ ಬೆಂಗಳೂರಿನ ಬಿಟಿಎಂ ಲೇಔಟ್‍ನಲ್ಲಿ ತಮ್ಮ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿರುವುದು ಇದೇ ಕಾರಣಕ್ಕಾಗಿ. ಜೈಲಿಗೆ ಹೋದ ಆನಂದ್ ಸಿಂಗ್ ಅವರನ್ನೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವಾಗ ನಾವು ಕೂಡ ಜನಾರ್ಧನ ರೆಡ್ಡಿಯನ್ನು ಏಕೆ ಸೇರ್ಪಡೆ ಮಾಡಿಕೊಳ್ಳ ಬಾರ ದೆಂಬುದು ಬಹುತೇಕ ನಾಯಕರ ವಾದವಾಗಿದೆ.
ಒಂದು ಕಾಲದಲ್ಲಿ ಬಿಜೆಪಿಯನ್ನೇ ಅಪೆÇೀಶನ ಮಾಡಿದ್ದ ರೆಡ್ಡಿ ಇಂದು ಮಾತೃಪಕ್ಷಕ್ಕೆ ಬರಲಿದ್ದಾರೆಯೇ? ಎಂಬುದನ್ನು ಕಾಲವೇ ನಿರ್ಧರಿಸಬೇಕು.

Facebook Comments

Sri Raghav

Admin