ಪೊಲೀಸರಿಗೆ ಶರಣಾದ ನಾರಾಯಣಸ್ವಾಮಿ : ಶೆಟ್ಟರ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

jagadish--shettar
ಬೆಂಗಳೂರು, ಫೆ.23-ಬಿಬಿಎಂಪಿ ಕಚೇರಿಯಲ್ಲಿ ಹಲ್ಲೆಗೆ ಮುಂದಾಗಿದ್ದ ನಾರಾಯಣಸ್ವಾಮಿಯನ್ನು ಪೊಲೀಸರು ಬಂಧಿಸಿಲ್ಲ. ಅವರೇ ಹೋಗಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಅವಧಿಯಲ್ಲಿ ಗೂಂಡಾಗಿರಿ ಮಿತಿ ಮೀರಿದೆ. ಇದು ಈ ಸರ್ಕಾರದ ಕೊನೆಯ ಅಧಿವೇಶನ ಎಂದ ಅವರು, ಮುಂಬರುವ ಚುನಾವಣೆಗೆ ಮತದಾರರನ್ನು ಎಳೆಯಲು ಕಾಂಗ್ರೆಸ್ ಧಾರವಾಡದಲ್ಲಿ ಸೀರೆ ಹಂಚಲು ಮುಂದಾಗಿದೆ. ಈ ಎಲ್ಲಾವಿಚಾರವನ್ನು ಚುನಾವಣಾ ಆಯೋಗ ಗಮನಿಸಬೇಕೆಂದು ಆಗ್ರಹಿಸಿದರು.

Facebook Comments

Sri Raghav

Admin