ಬಗೆದಷ್ಟೂ ಹೊರಬರುತ್ತಲೇ ಇವೆ ನೀರವ್ ಅಕ್ರಮಗಳು : ನಿನ್ನೆ ಐಷಾರಾಮಿ ಕಾರು, ಇಂದು ದುಬಾರಿ ವಾಚ್‍

ಈ ಸುದ್ದಿಯನ್ನು ಶೇರ್ ಮಾಡಿ

Nirav-Modi--01

ನ್ಯಾನವದೆಹಲಿ/ಮುಂಬೈ, ಫೆ.23-ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ(ಪಿಎನ್‍ಬಿ) 11,400 ಕೋಟಿ ರೂ.ಗಳ ವಂಚನೆ ಪ್ರಕರಣದ ತನಿಖೆ ಮತ್ತು ಶೋಧ ಕಾರ್ಯಾಚರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈ ಹಗರಣದ ಪ್ರಮುಖ ಆರೋಪಿ ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೇ ದುಬಾರಿ ವಿದೇಶಿ ವಾಚುಗಳ ಬೃಹತ್ ಸಂಗ್ರಹವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ಸಂಸ್ಥೆಗೆ ಸಂಬಂಧಿಸಿದ 30 ಕೋಟಿ ರೂ.ಗಳು ಇರುವ ಬ್ಯಾಂಕ್ ಖಾತೆಗಳು ಹಾಗೂ 13.86 ಕೋಟಿ ರೂ. ಬೆಲೆಬಾಳುವ ಷೇರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ದುಬಾರಿ ಆಮದು ಕೈಗಡಿಯಾರಗಳ ಸಂಗ್ರಹ, 178 ಉಕ್ಕಿನ ಕಪಾಟುಗಳು, 158 ಪೆಟ್ಟಿಗೆಗಳು, 60 ಇತರ ಕಂಟೈನರ್‍ಗಳನ್ನು ಸಹ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.

ಇಡಿ ಅಧಿಕಾರಿಗಳು ನಿನ್ನೆ ನೀರವ್ ಮತ್ತು ಮೆಹುಲ್ ಚೋಕ್ಸಿ ಗ್ರೂಪ್‍ಗೆ ಸೇರಿದ 94.52 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‍ಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ನೀರವ್ ಕಂಪನಿಗೆ ಸೇರಿದ 100 ಕೋಟಿ ರೂ. ಬೆಲೆಬಾಳುವ 9 ಐಷಾರಾಮಿ ಕಾರುಗಳನ್ನೂ ಸಹ ವಶಪಡಿಸಿಕೊಂಡಿದ್ದರು. ಒಂದು ದುಬಾರಿ ರೋಲ್ಸ್‍ರಾಯ್ ಘೋಸ್ಟ್, ಒಂದು ಮರ್ಸಿಡಿಸ್ ಬೆಂಝ್, ಒಂದು ಪೋರ್ಶೆ ಪನಾಮೆರಾ, ಮೂರು ಹೋಂಡಾ ವೆರಿಯಂಟ್ಸ್, ಒಂದು ಟೊಯೊಟಾ ಫಾರ್ಚುನರ್ ಮತ್ತು ಒಂದು ಇನ್ನೋವಾ ಸೇರಿದಂತೆ ಕೋಟ್ಯಂತರ ರೂ. ಬೆಲೆಬಾಳುವ 9 ಲಕ್ಷುರಿ ಕಾರುಗಳನ್ನು ಇಡಿ ಅಧಿಕಾರಿಗಳು ದಾಳಿ ವೇಳೆ ಜಪ್ತಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಾರೀ ಹಗರಣದಲ್ಲಿ ತಮ್ಮ ವಿರುದ್ಧ ಪ್ರಕರಣಗಳು ದಾಖಲಾಗುವುದಕ್ಕೆ ಮೊದಲೇ ದೇಶದಿಂದ ಪರಾರಿಯಾಗಿರುವ ನೀರವ್ ಮತ್ತು ಚೋಕ್ಸಿಯನ್ನು ಬಂಧಿಸುವ ನಿಟ್ಟಿನಲ್ಲಿ ಸಿಬಿಐ ಈಗಾಗಲೇ ಇಂಟರ್‍ಪೊಲ್ ನೆರವು ಕೇಳಿದ್ದು, ತನಿಖೆ ಪ್ರಗತಿಯಲ್ಲಿದೆ. ಷನಲ್ ಬ್ಯಾಂಕ್‍ನ(ಪಿಎನ್‍ಬಿ) 11,400 ಕೋಟಿ ರೂ.ಗಳ ವಂಚನೆ ಪ್ರಕರಣದ ತನಿಖೆ ಮತ್ತು ಶೋಧ ಕಾರ್ಯಾಚರಣೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಈ ಹಗರಣದ ಪ್ರಮುಖ ಆರೋಪಿ ಡೈಮಂಡ್ ಕಿಂಗ್ ನೀರವ್ ಮೋದಿಗೆ ಸೇರಿದ 44 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೇ ದುಬಾರಿ ವಿದೇಶಿ ವಾಚುಗಳ ಬೃಹತ್ ಸಂಗ್ರಹವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಸಂಸ್ಥೆಗೆ ಸಂಬಂಧಿಸಿದ 30 ಕೋಟಿ ರೂ.ಗಳು ಇರುವ ಬ್ಯಾಂಕ್ ಖಾತೆಗಳು ಹಾಗೂ 13.86 ಕೋಟಿ ರೂ. ಬೆಲೆಬಾಳುವ ಷೇರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ದುಬಾರಿ ಆಮದು ಕೈಗಡಿಯಾರಗಳ ಸಂಗ್ರಹ, 178 ಉಕ್ಕಿನ ಕಪಾಟುಗಳು, 158 ಪೆಟ್ಟಿಗೆಗಳು, 60 ಇತರ ಕಂಟೈನರ್‍ಗಳನ್ನು ಸಹ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.
ಇಡಿ ಅಧಿಕಾರಿಗಳು ನಿನ್ನೆ ನೀರವ್ ಮತ್ತು ಮೆಹುಲ್ ಚೋಕ್ಸಿ ಗ್ರೂಪ್‍ಗೆ ಸೇರಿದ 94.52 ಕೋಟಿ ರೂ. ಮËಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‍ಗಳನ್ನು ಜಪ್ತಿ ಮಾಡಿದ್ದರು. ಅಲ್ಲದೇ ನೀರವ್ ಕಂಪನಿಗೆ ಸೇರಿದ 100 ಕೋಟಿ ರೂ. ಬೆಲೆಬಾಳುವ 9 ಐಷಾರಾಮಿ ಕಾರುಗಳನ್ನೂ ಸಹ ವಶಪಡಿಸಿಕೊಂಡಿದ್ದರು.

ಒಂದು ದುಬಾರಿ ರೋಲ್ಸ್‍ರಾಯ್ ಘೋಸ್ಟ್, ಒಂದು ಮರ್ಸಿಡಿಸ್ ಬೆಂಝ್, ಒಂದು ಪೋರ್ಶೆ ಪನಾಮೆರಾ, ಮೂರು ಹೋಂಡಾ ವೆರಿಯಂಟ್ಸ್, ಒಂದು ಟೊಯೊಟಾ ಫಾರ್ಚುನರ್ ಮತ್ತು ಒಂದು ಇನ್ನೋವಾ ಸೇರಿದಂತೆ ಕೋಟ್ಯಂತರ ರೂ. ಬೆಲೆಬಾಳುವ 9 ಲಕ್ಷುರಿ ಕಾರುಗಳನ್ನು ಇಡಿ ಅಧಿಕಾರಿಗಳು ದಾಳಿ ವೇಳೆ ಜಪ್ತಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭಾರೀ ಹಗರಣದಲ್ಲಿ ತಮ್ಮ ವಿರುದ್ಧ ಪ್ರಕರಣಗಳು ದಾಖಲಾಗುವುದಕ್ಕೆ ಮೊದಲೇ ದೇಶದಿಂದ ಪರಾರಿಯಾಗಿರುವ ನೀರವ್ ಮತ್ತು ಚೋಕ್ಸಿಯನ್ನು ಬಂಧಿಸುವ ನಿಟ್ಟಿನಲ್ಲಿ ಸಿಬಿಐ ಈಗಾಗಲೇ ಇಂಟರ್‍ಪೊಲ್ ನೆರವು ಕೇಳಿದ್ದು, ತನಿಖೆ ಪ್ರಗತಿಯಲ್ಲಿದೆ.

Facebook Comments

Sri Raghav

Admin