ಲೈಂಗಿಕ ಕಿರುಕುಳ ಆರೋಪ : ಆಸ್ಟ್ರೇಲಿಯಾ ಉಪ ಪ್ರಧಾನಿ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Barnaby-Joyce

ಸಿಡ್ನಿ, ಫೆ.23-ಲೈಂಗಿಕ ಕಿರುಕುಳ ಮತ್ತು ಅಕ್ರಮ ಸಂಬಂಧದ ವಿವಾದಗಳ ಸುಳಿಗೆ ಸಿಲುಕಿರುವ ಆಸ್ಟ್ರೇಲಿಯಾ ಉಪ ಪ್ರಧಾನಮಂತ್ರಿ ಬರ್ನಾಬಿ ಜೊಯ್ಸ್ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿ, ಹಿಂದಿನ ಸ್ಥಾನಕ್ಕೆ ಮರಳಲಿದ್ದೇನೆ ಎಂದು ಜೊಯ್ಸ್ ಹೇಳಿದ್ದಾರೆ.  ಜೊಯ್ಸ್ ವಿರುದ್ಧ ಇತ್ತೀಚೆಗೆ ಲೈಂಗಿಕ ದೌರ್ಜನ್ಯ, ಅನೈತಿಕ ಸಂಬಂಧ ಸೇರಿದಂತೆ ಕೆಲವು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ತಮ್ಮ ಮಾಜಿ ಮಾಧ್ಯಮ ಸಲಹೆಗಾರ್ತಿ ಜೊತೆ ಸಂಬಂಧ ಹೊಂದಿದ(ಈಗ ಆಕೆ ಗರ್ಭಿಣಿ) ಆರೋಪವೂ ಇವರ ವಿರುದ್ಧ ಕೇಳಿ ಬಂದಿದೆ.

ಆಸ್ಟ್ರೇಲಿಯಾ ಅಧ್ಯಕ್ಷ ಮಾಲ್ಕಂ ಟರ್ನ್‍ಬುಲ್ ಅವರ ಲಿಬರೆಲ್ ಪಕ್ಷದೊಂದಿಗೆ ಕೈಜೋಡಿಸಿದ್ದ ನ್ಯಾಷನಲ್ ಪಾರ್ಟಿ ನಾಯಕ ಜೊಯ್ಸ್‍ಗೆ ಉಪ ಪ್ರಧಾನಿ ಹುದ್ದೆ ನೀಡಲಾಗಿತ್ತು. ಆಗಿನಿಂದಲೂ ಅನೇಕ ಹಗರಣ-ವಿವಾದಗಳು ಇವರನ್ನು ಸುತ್ತಿಕೊಂಡಿತ್ತು.

Facebook Comments

Sri Raghav

Admin