ಪ್ರಿಯಾಂಕ ವೈನ್‍ಗ್ಲಾಸ್ ತಲೆಗೆ ಹೊಡೆದುಕೊಂಡು ಪೀಸ್ ಪೀಸ್ ಮಾಡಿದ್ದೇಕೆ..! (Video)

ಈ ಸುದ್ದಿಯನ್ನು ಶೇರ್ ಮಾಡಿ

Priyanka--01

ನ್ಯೂಯಾರ್ಕ್, ಫೆ.24-ಬಾಲಿವುಡ್ ದೇಸಿ ಗರ್ಲ್ ಮತ್ತು ಹಾಲಿವುಡ್‍ನ ಬೋಲ್ಡ್ ಬೇಬಿ ಪ್ರಿಯಾಂಕ ಚೋಪ್ರಾ ತನ್ನ ತಲೆಗೆ ವೈನ್‍ಗ್ಲಾಸ್‍ನನ್ನು ಹೊಡೆದುಕೊಂಡು ಪೀಸ್ ಪೀಸ್ ಮಾಡಿದ್ದಾಳೆ..! ಇದಕ್ಕೆ ಕಾರಣವೇನು..? ಪಿಗ್ಗಿ ಈ ರೀತಿ ಮಾಡಿದ್ದು ಯಾವುದೋ ಸಿನಿಮಾದ ಶೂಟಿಂಗ್‍ಗಾಗಿ ಅಲ್ಲ ಅಥವಾ ತನ್ನ ಸಾಮಥ್ರ್ಯ ತೋರಿಸಿ ಪ್ರಚಾರ ಗಿಟ್ಟಿಸುವುದಕ್ಕೂ ಅಲ್ಲ… ಪಿಂಕಿ ಈ ಅಪಾಯಕಾರಿ ಕೃತ್ಯಕ್ಕೆ ಕೈಹಾಕಲು ಹತಾಶೆ ಕಾರಣವಂತೆ..! ಹೌದು.. ಇದನ್ನು ಪ್ರಿಯಾಂಕಾಳೇ ಸ್ವತಃ ಹೇಳಿಕೊಂಡಿದ್ಧಾಳೆ.

ಕೆಲಸದ ಒತ್ತಡ ಮತ್ತು ಒತ್ತಡದಿಂದ ಉಂಟಾಗುತ್ತಿರುವ ಖಿನ್ನತೆ-ಹತಾಶೆಯಿಂದ ಹೊರಬರಲು ಪೀಸೀ ಕಂಡುಕೊಂಡ ತಾತ್ಕಾಲಿಕ ಉಪಶಮನ ಇದು. ಈಕೆ ಜನಪ್ರಿಯ ಅಮೆರಿಕನ್ ಟಿವಿ ಸೀರಿಯಲ್ ಕ್ವಾಂಟಿಕೋದಲ್ಲಿ ಬ್ಯುಸಿಯಾಗಿದ್ದಾಳೆ. ಈಕೆಗೆ ಬಿಡುವೆಂಬುದೇ ಇಲ್ಲ. ಮುಂಜಾನೆಯಿಂದ ರಾತ್ರಿವರೆಗೆ ಈಕೆ ನಿರಂತರ ಶೂಟಿಂಗ್‍ನಲ್ಲಿರುತ್ತಾಳೆ. ಬೆಳಗ್ಗೆ ನೈನ್‍ನಿಂದ ರಾತ್ರಿ ವೈನ್ ಸಮಯದವರೆಗೆ ಬಿಡುವಿಲ್ಲದೇ ಕೆಲಸ ಮಾಡಿದರೆ ಈ ರೀತಿ ಆಗುತ್ತದೆ. ನಾನು ಹತಾಶೆಯಿಂದ ಹೀಗೆ ಮಾಡುತ್ತಿದ್ದೇನೆ. ನೀವು ಯಾರೂ ಇದನ್ನು ಪ್ರಯತ್ನಿಸಬೇಡಿ ಮತ್ತು ಅನುಕರಿಸಬೇಡಿ ಎಂದು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿರುವ ಪಿಗ್ಗಿ ವೀಡಿಯೋವನ್ನೂ ಪೋಸ್ಟ್ ಮಾಡಿದ್ದಾಳೆ.

ದೊಡ್ಡ ವೈನ್‍ಗ್ಲಾಸ್‍ನಲ್ಲಿ ಕಡೆ ಸಿಪ್ ವೈನ್ ಹೀರಿದ ನಂತರ ಏನನ್ನೋ ಯೋಚಿಸುತ್ತಾ ಪ್ರಿಯಾಂಕಾ ಹಠಾತ್ತನೆ ತನ್ನ ತಲೆಗೆ ದ್ರಾಕ್ಷಾರಸದ ಗಾಜಿನ ಶೀಷೆಯನ್ನು ಜೋರಾಗಿ ಬಡಿದುಕೊಳ್ಳುತ್ತಾಳೆ. ಆ ರಭಸಕ್ಕೆ ಗ್ಲಾಸ್ ಪೀಸ್ ಪೀಸ್ ಆಗುತ್ತದೆ. ನಂತರ ತನ್ನ ತಲೆಯನ್ನು ಕೊಡವಿಕೊಳ್ಳುವ ದೃಶ್ಯ ಇದರಲ್ಲಿದೆ.

ಪಿಂಕ್ ಬಾಲಿವುಡ್‍ಗೆ ಕಮ್‍ಬ್ಯಾಕ್ :
ಐತ್ರಾಜ್-2 ಸಿನಿಮಾ ಮೂಲಕ ಪ್ರಿಯಾಂಕ ಬಾಲಿವುಡ್‍ಗೆ ಬರುವುದು ಬಹುತೇಕ ಖಚಿತವಾಗಿದೆ. 2004ರಲ್ಲಿ ತೆರೆಕಂಡ ಐತ್ರಾಜ್ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ಪಿಗ್ಗಿ ಅದ್ಭುತ ನಟನೆಗಾಗಿ ಪ್ರಶಸ್ತಿಗಳನ್ನು ಗಿಟ್ಟಿಸಿದ್ದಳು. ಶೋಮ್ಯಾನ್ ಸುಭಾಷ್ ಘಾಯ್ ನಿರ್ಮಾಣದ ತ್ರಿಕೋನ ಪ್ರೇಮಕಥೆಯಲ್ಲಿ ಅಕ್ಷಯ್‍ಕುಮಾರ್ ಮತ್ತು ಕರೀನಾ ಕಪೂರ್ ನಟಿಸಿದ್ದರು. ಎರಡನೇ ಭಾಗದಲ್ಲೂ ನಟಿಸುವಂತೆ ಪಿಗ್ಗಿಗೆ ಗಾಳ ಹಾಕುವಲ್ಲಿ ಸುಭಾಷ್ ಸಾಹೇಬರು ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin