ಮುಂಬೈ ಕರ್ನಾಟಕದಲ್ಲಿ ರಾಹುಲ್ ಮಿಂಚಿನ ಸಂಚಲನ, ಮೋದಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Rahul--02

ಬೆಳಗಾವಿ, ಫೆ.24- ಕಾಂಗ್ರೆಸ್ ಪಕ್ಷದಲ್ಲೀಗ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲೆಡೆ ನಾಯಕರು, ಕಾರ್ಯಕರ್ತರು ಪಾದರಸದಂತೆ ಸಂಚಲನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಾಂಘಿಕ ಹೋರಾಟಕ್ಕೆ ಪಣತೊಟ್ಟಿದ್ದಾರೆ. ಕಾರ್ಯಕರ್ತರ ಪಡೆ ವಿಧಾಸಭೆ ಚುನಾವಣೆಗೆ ಸಜ್ಜಾಗಿದ್ದಾರೆ. ಒಟ್ಟಾರೆ ಮುಂಬೈ ಕರ್ನಾಟಕದಲ್ಲಿ ಈಗ ರಾಹುಲ್ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿತು. ಜನಾಶೀರ್ವಾದ ಪಡೆದು ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಮುಂಬೈ ಕರ್ನಾಟಕಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಹೈದರಾಬಾದ್ ಕರ್ನಾಟಕದಲ್ಲಿ ಸಂಘಟಿಸಿದ್ದ ಮೊದಲ ಹಂತದ ರಾಹುಲ್‍ಗಾಂಧಿ ಜನಾಶೀರ್ವಾದ ಯಾತ್ರೆಗೆ ಅಪಾರ ಜನಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲೀಗ ಸಂತಸದ ಹೊನಲು ಹರಿದಿದೆ. ಈಗ ಅದರ ಮುಂದುವರೆದ ಭಾಗವಾಗಿ ರಾಹುಲ್‍ಯಾತ್ರೆ ಚಿಕ್ಕೋಡಿಯಿಂದ ಆರಂಭವಾಯಿತು. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗಾವಿ ನಗರದ ಸಾಂಬ್ರ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್‍ಗಾಂಧಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅದ್ಧೂರಿ ಸ್ವಾಗತ ಕೋರಿದರು.
ನಂತರ ಹೆಲಿಕಾಫ್ಟರ್ ಮೂಲಕ ರಾಹುಲ್‍ಗಾಂಧಿ ಅಥಣಿ ಹೊರವಲಯದ ಕರಿಮಸುತಿ ಗ್ರಾಮದಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಸಮಾವೇಶ ನಡೆಯುವ ಸ್ಥಳಕ್ಕೆ ತೆರಳಿದರು.

WhatsApp Image 2018-02-24 at 3.45.13 PM

ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದವು. ಬದಲಾದ ರಾಜಕೀಯ ಸ್ಥಿತಿಯಲ್ಲಿ ಈ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ನಂತರ ಕಳೆದ ಬಾರಿ ಬಿಜೆಪಿ-ಕೆಜೆಪಿ ವಿಭಜನೆ ಲಾಭ ಪಡೆದ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಈ ಪಾರುಪತ್ಯವನ್ನು ಮುಂದುವರೆಸಿ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ರಾಹುಲ್‍ಯಾತ್ರೆಯನ್ನು ಆಯೋಜಿಸಲಾಗಿತ್ತು.

ಈ ಸಾರ್ವಜನಿಕ ಸಭೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ವಿವಿಧ ಜಿಲ್ಲೆಗಳಿಂದ ಸುಮಾರು 2ಸಾವಿರ ಬಸ್‍ಗಳಿಂದ ಜನ ಆಗಮಿಸಿದ್ದಲ್ಲದೆ, ಟೆಂಪೋ, ಲಾರಿ, ವಿವಿಧ ವಾಹನಗಳಲ್ಲಿ ಜನ ಆಗಮಿಸಿದ್ದರು. ಸಾರ್ವಜನಿಕ ಸಭೆಯಲ್ಲಿ ರಾಹುಲ್‍ಗಾಂಧಿ ಜಿಎಸ್‍ಟಿ, ನೋಟು ನಿಷೇಧದಿಂದ ಸಾರ್ವಜನಿಕರು ಅನುಭವಿಸಿದ ತೊಂದರೆಗಳನ್ನು ಪುರುಚ್ಚರಿಸಿದ ಅವರು, ಸಾವಿರಾರು ಕೋಟಿಗಳನ್ನು ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಉದ್ಯಮಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಸರ್ಕಾರದ ನಿರ್ಲಕ್ಷ್ಯ ಕ್ರಮವನ್ನು ಖಂಡಿಸಿದರು. ಅಮಾಯಕ ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯ ಸರ್ಕಾರದ ಹಲವು ಭಾಗ್ಯಗಳನ್ನೂ ಕುರಿತು ಪ್ರಸ್ತಾಪಿದರು. ಅಧಿಕೃತವಾಗಿ ರಾಹುಲ್‍ವೇಳಾ ಪಟ್ಟಿಯಲ್ಲಿ ದೇವಾಲಯ, ಮಠಮಾನ್ಯಗಳ ಭೇಟಿ ಪ್ರಸ್ತಾಪ ಇಲ್ಲದಿದ್ದರೂ ಸವದತ್ತಿಯ ಯಲ್ಲಮ್ಮ ದೇವಸ್ಥಾನ, ವಿಜಯಪುರದ ದರ್ಗಾ, ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಅಜ್ಜನವರ ಗದ್ದುಗೆ, ಇಂಡಿಪಂಥನ ಪತೇಶ ದರ್ಗಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

WhatsApp Image 2018-02-24 at 3.45.13 PM

ಮಧ್ಯಾಹ್ನ ಅಥಣಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ವಿಜಯಪುರದಲ್ಲಿ ತ್ರಿಕೋಟದಲ್ಲಿ ಆಯೋಜಿಸಿರುವ ಸ್ತ್ರೀಶಕ್ತಿ ಸಮಾವೇಶನದಲ್ಲಿ ರಾಹುಲ್‍ಗಾಂಧಿ ಪಾಲ್ಗೊಳ್ಳಲಿದ್ದಾರೆ. ನಂತರ ಚಿಕ್ಕೋಡಿಯಲ್ಲಿ ಸಭೆ ನಡೆಸಲಿದ್ದಾರೆ. ಬಿಜಾಪುರದವರೆಗೆ ಬಸ್‍ನಲ್ಲಿ ಸಂಚರಿಸಲಿರುವ ರಾಹುಲ್, ಪಕ್ಷದ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ. ನಾಳೆ ಬಾಗಲಕೋಟೆ ಜಿಲ್ಲೆ ಜಮಖಂಡಿ ಬಳಿ ನೀರು ತುಂಬಿರುವ ಬ್ಯಾರೆಜ್ ಬಳಿ ಸಂಭ್ರಮಾಚರಣೆ, ವಿಜಯಪುರ ಜಿಲ್ಲೆ ಮುಳವಾಡಕ್ಕೆ ಭೇಟಿ ನೀಡಲಿದ್ದಾರೆ. ಮುಧೋಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೋಳ್ಳಲಿದ್ದಾರೆ. ನಾಡಿದ್ದು ಬಾಗಲಕೋಟೆ, ವಿಜಯಪುರ ಮುಖಂಡರೊಂದಿಗೆ ಸಭೆ ನಡೆಸಿ ರಾಮದುರ್ಗ, ಸವದತ್ತಿಯಲ್ಲಿ ಕಾರ್ನರ್ ಸಭೆ, ಧಾರವಾಡ ಮೂಲಕ ಹುಬ್ಬಳ್ಳಿಗೆ ತೆರಳಿ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ದೆಹಲಿಗೆ ಹಿಂದಿರುಗಲಿದ್ದಾರೆ.

ಕಟೌಟ್‍ಗಳ ಅಬ್ಬರ: ಸಂಚಾರಕ್ಕೆ ಅಡಚಣೆ:
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಮುಖಂಡರು ರಸ್ತೆಯುದ್ದಕ್ಕೂ ಅಳವಡಿಸಿದ್ದ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕಟೌಟ್‍ಗಳಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಅಥಣಿ ಹೊರವಲಯದ ಕರಿಮಸತಿ ಗ್ರಾಮದ ಬಳಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಮಾರ್ಗದುದ್ದಕ್ಕೂ ಬೃಹತ್ ಪ್ರಮಾಣದ ಕಟೌಟ್, ಬಂಟಿಂಗ್ಸ್ , ಬ್ಯಾನರ್‍ಗಳನ್ನು ಕಟ್ಟಲಾಗಿದ್ದು, ಸಮಾರಂಭಕ್ಕೆ ಭಾರೀ ಪ್ರಮಾಣದಲ್ಲಿ ವಾಹನಗಳು ಬಂದಿದ್ದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿ ವಾಹನ ದಟ್ಟಣೆ ಕಡಿಮೆ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಮೋದಿ ವಿರುದ್ಧ ರಾಹುಲ್ ವಾಗ್ದಾಳಿ :
ರಾಹುಲ್ ಗಾಂಧಿ ಕನ್ನಡದಲ್ಲಿ ನಮಸ್ಕಾರ ಎಂದು ಭಾಷಣ ಪ್ರಾರಂಭಿಸಿದ ರಾಹುಲ್ ಗಾಂಧಿ ಕಾಂಗ್ರೇಸ್ ನ ಎಲ್ಲ ಕಾರ್ಯಕರ್ತರ ಮೇಲೆ ನಂಬಿಕೆ ವಿದೆ ಕರ್ನಾಟಕ ಮೇಲೆ ನಂಬಿಕೆ ವಿದೆ. ನಾವೇಲರೂ ಒಂದೆ ಕಾಂಗ್ರೇಸ್ ನ ವಿಚಾರಗಳ ಬಹಳಷ್ಟು ಇವೇ ರೈತರ ಬಡವರ ಮದ್ಯಮ ವರ್ಗದ ವರ ಸಹಾಯವನ್ನು ಮಾಡುತ್ತೆವೆ. ಭ್ರಷ್ಟಾಚಾರ ವಿರುದ್ದ ನಾನು ಹೊರಾಟ ಮಾಡುತ್ತೆನೆ ನೋಡಿದಂತೆ ನಡೆ ಎಂದು ನಾನು ನಡೆಯುತ್ತೆನೆ ಕಳೆದ ೫ ವರ್ಷಗಳಲ್ಲಿ ರೈತರ ಸಹಾಯವನ್ನು ಮಾಡುತ್ತಿದೆವೆ ಕರ್ನಾಟಕದ ರೈತರ ಸಲಾ ಮನ್ನಾ ಮಾಡುವುದು, ನರೇಂದ್ರ ಮೋದಿ ಸರಕಾರ ದೇಶದ ತೂಂಬ ವಿದೆ ಆದರೆ ಒಂದೇ ಒಂದು ರಾಜ್ಯದಲ್ಲಿ ಅಂದರೆ ಅದು ಕರ್ನಾಟಕದಲ್ಲಿ ಮಾತ್ರ ಎಂದರು. ಜನರಿಗೆ ಮೋಸ ಮಾಡಬೇಡಾ ಜನರಿಗೆ ಸುಳ್ಳು ಹೇಳಬೇಡಾ ಜನರಿಗೆ ಸಹಾಯ ಮಾಡು ಎಂದು ವಿಶ್ವಗುರು ಬಸವೇಶ್ವರ ಹೇಳೊದ್ದಾರೆ ಆದರೆ ಇಲ್ಲಾ ಎಲ್ಲಾ ಉಲ್ಟಾನಡೆಯುತ್ತಿದೆ. ಹಿಂದೂಸ್ಥಾನ ಬ್ಯಾಂಕ್ ದಿಂದ ೨೨ ಕೋಟಿರೂ ಲೂಟ್ಟಿ ಮಾಡಿದ್ದಾರೆ ಗುಜರಾತ್ ನಲ್ಲಿ ಮೋಸದಿಂದ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದಿದೆ ಪ್ರತಿಯೊಬ್ಬರಿಗೆ ೫೦ ಲಕ್ಷ ರೂ ಹಾಕುತ್ತೆನೆ ಎಂದು ಜನರಿಗೆ ಮೋಸ ಮಾಡಿದ್ದವರು. ನರೇಂದ್ರ ಮೋದಿಯವರೆ ದೇಶದ ಜನರಿಗೆ ಸುಳ್ಳು ಹೆಳಬೇಡಿ ಮೋಸ ಮಾಡಬೇಡಿ ಕರ್ನಾಟಕ ಎಲ್ಲ ಜನತೆಗೆ ಎಲ್ಲ ಪ್ರಕಾರದ ಸೌಲಭ್ಯಗಳನ್ನು ಮಾಡುವುದು ಎಂದು ಹೇಳಿದರು.

ಸಿದ್ದು ವ್ಯಂಗ್ಯ :
ಬೆಳಗಾವಿಯಲ್ಲಿ ನಡೆಯುತ್ತಿರುವ ಜನಾಶಿರ್ವಾದ ಯಾತ್ರೆಯ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಬಿಜೆಪಿಗೆ ಸವಾಲಾಕಿದ್ದಾರೆ. ಮೊದಲು ಎಲ್ಲಾ ಕಡೆ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಆದರೆ ಇದೀಗ ನೀರವ ಮೋದಿ ನೀರವ ಮೋದಿ ಎನ್ನುತ್ತಿದ್ದಾರೆ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ತರುವಂತೆ ತಾವೆಲ್ಲಾ ಮಾಡಬೇಕು. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ತರುವ ಮೂಲಕ ರಾಷ್ಟ್ರದಲ್ಲಿಯೇ ಬಿಜೆಪಿ ಮುಕ್ತ ರಾಷ್ಟ್ರ ಮಾಡಲು ನಮಗೆ ಶಕ್ತಿ ನೀಡಬೇಕೆಂದು ನೆರೆದಿದ್ದ ಜನರನ್ನು ಕೇಳಿ ಕೊಂಡರು. ಜೊತೆಗೆ ನಾವು ಈ ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಬಿಜೆಪಿ ಮುಕ್ತ ಭಾರತ ಮಾಡುವುದಾಗಿ ನಾನು ನಿಮ್ಮ ಮುಂದೆ ಪಣ ತೊಡುತ್ತಿದ್ದೇನೆ ಎಂಬ ಮಾತುಗಳನ್ನಾಡಿದರು. ಇತ್ತ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನ ಸಿಎಂ ಸಿದ್ದರಾಮಯ್ಯನವರ ಈ ಸವಾಲಿಗೆ, ಪಣಕ್ಕೆ ಝೇಂಕರಿಸಿ, ಚಪ್ಪಳೆ ತಟ್ಟಿ ಸಾಥ್ ನೀಡಿದರು. ಜೊತೆಗೆ ಸಿಎಂ ಸಿದ್ದರಾಮಯ್ಯ ತಾವೆಲ್ಲರೂ ಮುಂಬರುವ ಲೋಕಸಭೆಯಲ್ಲಿಯೂ ರಾಹುಲ್ ಗಾಂಧಿಯರವರಿಗೆ ಶಕ್ತಿ ತುಂಬ ಬೇಕು ಎಂದು ಮನವಿ ಮಾಡಿದರು.

ಜನಾಶೀರ್ವಾದ ಕಾರ್ಯಕ್ರಮ ಹಿಂದೆ ನಡೆದಿಲ್ಲ ಮುಂದೆನು ನಡೆಯುವುದಿಲ್ಲ : ಖರ್ಗೆ
ಅಥಣಿ ವಿಧಾನ ಸಭಾ ಮತ ಕ್ಷತ್ರದಲ್ಲಿ ಹಿಂತಹ ಜನಾಶೀರ್ವಾದ ಕಾರ್ಯಕ್ರಮ ಹಿಂದೆ ನಡೆದಿಲ್ಲ ಮುಂದೆನು ನಡೆಯುವುದಿಲ್ಲ ಎಂದು ಹೇಳಿಕೆ ಕಾಂಗ್ರೇಸ್ ಪಕ್ಷದ ಸರಕಾರ 75 ಶೇಕಡಾ ಭ್ರಷ್ಟ ಚಾರ ಮಾಡಿದೆ ಎಂದು ಹೇಳತ್ತಿರಲ್ಲಾ ನಿಮ್ಮ ಬಿಜೆಪಿ ಸರಕಾರ 90 ಶೇಕಡಾ ಭ್ರಷ್ಟಾಚಾರ ಮಾಡಿದೆ ಅದನ್ನು ಹೇಳುವುದನ್ನು ಬಿಟ್ಟು ಕಾಂಗ್ರೇಸ್ ಪಕ್ಷದ ಮೇಲೆ ಆರೋಪ ಮಾಡಿತ್ತಿರಲ್ಲಾ ನಿವೂ ಹೆತವರಿರಬೇಕು ಗುಜರಾತ್ ಚುನಾವಣೆಯು ಮೂಸದ ಚುನಾವಣೆ ಬಿಜೆಪಿಯವರು ನಮ್ಮಗೆ ಮೋಸ ಮಾಡಿದ್ದಾರೆ. ಅದು ಮೋಸದ ಚುನಾವಣೆ ಕಾಂಗ್ರೇಸ್ ಪಕ್ಷಕ್ಕೆ 18 ರಲ್ಲಿ 15 ಸಿಟ್ಟುಗಳು ಬರುತ್ತವೆ ಎಂದರು ಕರ್ನಾಟಕದಲ್ಲಿ ಮತ್ತೆ ಕಾಂಗ್ರೇಸ್ ಸರಕಾರ ಖಂಡಿತವಾಗಿ ಎಂದರು

Facebook Comments

Sri Raghav

Admin