ಮೊದಲ ಬಾರಿ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡ ಮೈಸೂರು ಮಹಾರಾಜ

ಈ ಸುದ್ದಿಯನ್ನು ಶೇರ್ ಮಾಡಿ

Mysuru-King

ಶ್ರವಣಬೆಳಗೊಳ, ಫೆ.24- ಶಾಂತಿ ಮತ್ತು ಅಹಿಂಸೆಯ ಸಂಕೇತ ಶ್ರೀ ಭಗವಾನ್ ಬಾಹುಬಲಿ. ಮೊದಲ ಬಾರಿ ಮಹಾಮಜ್ಜನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷವಾಗುತ್ತಿದೆ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಜೈನ ಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 88ನೆಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ ಮನೆತನದ ಸಂಪ್ರದಾಯದಂತೆ ನಾನು ವಿಂಧ್ಯಗಿರಿಗೆ ಭೇಟಿ ನೀಡಿ ಭಗವಾನ್ ಬಾಹುಬಲಿಯ ದರ್ಶನ ಪಡೆದಿದ್ದೇನೆ. ಈ ಕ್ಷೇತ್ರಕ್ಕೆ ನಮ್ಮ ಕುಟುಂಬದವರ ಸೇವೆಯೂ ಇದೆ.

ಪಶ್ಚಿಮ ದ್ವಾರದ ಮೂಲಕ ಕಾಲ್ನಡಿಗೆಯಲ್ಲಿ ವಿಂಧ್ಯಗಿರಿ ಬೆಟ್ಟವನ್ನೇರಿ ಸಹಸ್ರಾರು ಜನರ ಸಮ್ಮುಖದಲ್ಲಿ ವಿರಾಟ್ ಮೂರ್ತಿಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಿಜಿಯವರೊಂದಿಗೆ ಜಲಾಭೀಷೇಕ ನೇರವೇರಿಸಿ ಪುಷ್ಪ್ಪಾರ್ಚನೆ ಮಾಡಿದರು. ನಂತರ ಸಮಾಜದಲ್ಲಿ ಶಾಂತಿ ನೆಲೆಸಿ, ಪ್ರತಿಯೊಬ್ಬರು ತ್ಯಾಗ ಮತ್ತು ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣವಾಗಲು ಸಹಕರಿಸಬೇಕು ಎಂದರು.

ಮಹಾಮಸ್ತಕಾಭಿಷೇಕಕ್ಕೂ ಮೈಸೂರು ಸಂಸ್ಥಾನಕ್ಕೂ ಬಹಳ ಹಿಂದಿನ ಸಂಬಂಧವಿದೆ, ನಮ್ಮ ಪೂರ್ವಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರವಣಬೆಳಗೊಳದ ಕಲ್ಯಾಣಿ ನಿರ್ಮಾಣಕ್ಕೆ ಕೊಡುಗೆ ನೀಡಿದ್ದು. ಅವರು ಕೂಡ ಮಸ್ತಕಾಭಿಷೇಕ ಮಹೋತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ. ಹಾಗೆಯೇ ನಾನೂ ಕೂಡ ಅದೇ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದ್ದೇನೆ. ವಿಶ್ವಕ್ಕೆ ಶಾಂತಿಯ ಸಂದೇಶ ಸಾರುತ್ತಿರುವ ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ಸಂದೇಶಗಳನ್ನು ಪಾಲಿಸಿದಲ್ಲಿ ಜಾಗತಿಕ ಮಟ್ಟದಲ್ಲಿಯೂ ಕೂಡ ಶಾಂತಿ ನೆಲೆಸಲಿದೆ ಎಂದು ಹೇಳಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬೆಳ್ಳಿ ಕಳಶ ನೀಡಿ ಗೌರವಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin