ಎನ್‍ಟಿಆರ್‍ ಗೆ ಮೊಮ್ಮಗಳಾಗಿದ್ದವಳು ಒಂದು ದಿನ ಅವರಿಗೇ ಸಂಗಾತಿಯಾಗಿದ್ದ ಶ್ರೀದೇವಿ..!

ಈ ಸುದ್ದಿಯನ್ನು ಶೇರ್ ಮಾಡಿ

NRT

ಶ್ರೀದೇವಿ ಎಂದಾಕ್ಷಣ ಆಕೆಯ ಮುಗ್ಧ ಅಭಿನಯದೊಂದಿಗೆ ಆಕೆಯೊಂದಿಗೆ ನಟಿಸಿದ್ದ ನಟರುಗಳು ಕೂಡ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಇಲ್ಲೂ ಕೂಡ ಶ್ರೀದೇವಿ ತಮ್ಮದೇ ವೈಶಿಷ್ಟ್ಯತೆಯನ್ನು ಹೊಂದಿದ್ದಾರೆ. ತೆಲುಗು ಚಿತ್ರರಂಗದ ಅತಿರಥ ನಾಯಕ ಎನ್.ಟಿ.ರಾಮರಾವ್‍ರೊಂದಿಗೆ 1972ರಲ್ಲಿ ಬದಿ ಪಂತಲು ಚಿತ್ರದಲ್ಲಿ ಎನ್‍ಟಿಆರ್‍ರ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದ ಶ್ರೀದೇವಿ ನಂತರ ಎನ್‍ಟಿಆರ್‍ರೊಂದಿಗೆ ಅನೇಕ ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿ ಮಿಂಚಿದ್ದರು.
1979ರಲ್ಲಿ ವೇಟಗಾಡು ಚಿತ್ರದಲ್ಲಿ ಎನ್‍ಟಿಆರ್‍ಗೆ ನಾಯಕಿಯಾಗಿ ನಟನೆ ಆರಂಭಿಸಿದ ಶ್ರೀದೇವಿ ನಂತರ ಅನುರಾಗ ದೇವತಾ, ಬೊಬ್ಬಲಿ ಪುಲಿ, ಜಸ್ಟೀಸ್ ಚೌದರಿ, ವಯ್ಯಾರಿ ಬಮಾಲು ವಂಗಾಲಾಮಾರಿ ಬರ್ತುಲು, ಅಗ್ನಿ ರವ್ವಾ, ಗಜದೊಂಗ, ಕೊಂಡವಿಡಿ ಸಿಂಹಂ, ಸತ್ಯಂ ಶಿವಂ, ರೌಡಿ ರಾಮುಡು ಕೊಂಟಿ ಕೃಷ್ಣುಡು, ವೇಟಗಾಡು, ಸಿಂಹಂ ನವ್ವಿನಿದಿ ಚಿತ್ರಗಳಲ್ಲಿ ರಾಮರಾವ್‍ರ ಸಂಗಾತಿಯಾಗಿ ಮಿಂಚಿದ್ದು ಬಹುತೇಕ ಚಿತ್ರಗಳು ತೆಲುಗು ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಿದೆ.

ತನ್ನ 13ನೆ ವಯಸ್ಸಿನಲ್ಲೇ ಸೂಪರ್‍ಸ್ಟಾರ್ ರಜನಿಕಾಂತ್‍ರ ತಾಯಿಯಾಗಿ ಮೂಂಡ್ರು ಮುಡಿಚು ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಸಿ ಮಿಂಚಿದ್ದ ಶ್ರೀದೇವಿ ನಂತರ ಹೀರೋಯಿನ್ ಆಗಿಯೂ ರಜನಿಯೊಂದಿಗೆ ಜೋಡಿಯಾಗಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಪೈಪೋಟಿ ಗೆ ಬಿದ್ದಂತೆ ನಟಿಸುತ್ತಿದ್ದ ಶ್ರೀದೇವಿ ಮೊದಲ ಬಾರಿಗೆ ರಜನಿಯೊಂದಿಗೆ ನಟಿಸಿದ ತಮಿಳು ಚಿತ್ರ ವಾದಹಿನ್‍ಇಲೈ. ನಂತರ ಟಾಲಿವುಡ್, ಬಾಲಿವುಡ್‍ನಲ್ಲೂ ಈ ಜೋಡಿ ಸಾಕಷ್ಟು ಮೋಡಿ ಮಾಡಿತ್ತು. ರಜನಿ ಹಾಗೂ ಶ್ರೀದೇವಿ ಪ್ರಿಯಾ, ಧರ್ಮಾತ್ಮ, ರಾಮ್ ರಹೀಮ್ ರಾಬರ್ಟ್, ಜಾನಿ, ರನುವಾ ವೀರಾನ್, ಪೋಕರಿ ರಾಜಾ, ಜುಲ್ಮ್ ಕೀ ಜಂಜೀರ್, ಅಜ್ ಕ ದಾದಾ, ಭಗವಾನ್ ದಾದಾ, ಗೈರ್ ಕಾನೂನಿ, ಚಾಲ್‍ಬಾಜ್, ಫರೀಸ್ತೆ, ಚೋರ್ ಕಿ ಗರ್ ಚೋರ್‍ನಿ ಸೇರಿದಂತೆ 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು.

Facebook Comments

Sri Raghav

Admin