ಕಿರುತೆರೆಯಲ್ಲೂ ಮಿಂಚು ಹರಿಸಿದ್ದ ಶ್ರೀದೇವಿ

ಈ ಸುದ್ದಿಯನ್ನು ಶೇರ್ ಮಾಡಿ

Srievi--01

ಮುಂಬೈ, ಫೆ.25- ಹಿರಿತೆರೆಯಲ್ಲಿ ತಮ್ಮ ನಟನೆಯ ಮಿಂಚು ಹರಿಸಿದ್ದ ಮೋಹಕ ಸುಂದರಿ, ರೂಪ್‍ಕಿ ರಾಣಿ ಶ್ರೀದೇವಿ ಕಿರುತೆರೆಯಲ್ಲೂ ವಿಶಿಷ್ಟ ಛಾಪು ಮೂಡಿಸಿದರು. ಹಿರಿತೆರೆಯಿಂದ ಕೆಲ ವರ್ಷಗಳ ಕಾಲ ದೂರ ಉಳಿದಿದ್ದ ಶ್ರೀದೇವಿ ಮತ್ತೆ ಬಣ್ಣ ಹಚ್ಚಿದ್ದು ಕಿರುತೆರೆಯಿಂದಲೇ. 2004ರಲ್ಲಿ ಸಹರಾ ಸಿಟ್‍ಕಾಮ್ ಮಾಲಿನಿ, ಜೀನಾ ಇಸಾ ಕಾ ನಾಮ್ ಹೈ ಧಾರಾವಾಹಿಗಳಲ್ಲಿ ತಮ್ಮ ನಟನೆಯಿಂದ ಕಿರುತೆರೆಯಲ್ಲೂ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಗಿಂಡಿದ್ದ ಶ್ರೀದೇವಿ, ಕೆಲವು ಟೀವಿ ರಿಯಾಲ್ಟಿ ಷೋಗಳ ತೀರ್ಪುಗಾರರಾಗಿಯೂ ಗಮನ ಸೆಳೆದಿದ್ದರು.

2005ರಲ್ಲಿ ಪ್ರಸಾರಗೊಗಿಂಡ ಸಂಗೀತದ ರಿಯಾಲ್ಟಿ ಷೋ ಆದ ಕಾಬೂಮ್, 2009ರಲ್ಲಿ ಸೋನಿ ಚಾನಲ್ ಹಮ್ಮಿಕೊಂಡಿದ್ದ ದಸ್ ಕ ದಮ್‍ಗೂ ತೀರ್ಪುಗಾರರಾಗಿದ್ದರು.  2007ರಲ್ಲಿ ನಡೆದ 52ನೆ ಫಿಲ ಫೇರ್ ಪ್ರಶಸ್ತಿಯ ಆಯ್ಕೆ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಶ್ರೀದೇವಿ, ತಮ್ಮ ಚಿತ್ರಗಳಿಗೆ ಮಾತ್ರವಲ್ಲದೆ ಹಲವು ಉದಯೋನ್ಮುಖ ನಟ, ನಟಿಯರ ಚಿತ್ರಗಳಿಗೆ ಪ್ರಚಾರವನ್ನು ಮಾಡುವ ಮೂಲಕ ಗಮನ ಸಳೆದಿದ್ದರು. ಶ್ರೀದೇವಿಗೆ ಸಮಾಜ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಅಗಾಧ ಕಾಳಜಿ ಇತ್ತು. ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಟ್ ಅಮೀರ್‍ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಆಕೆ ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯಿಸಿದ ರೀತಿಗೆ ಅಂದಿನ ಕೇಂದ್ರ ಸರ್ಕಾರದಿಂದಲೂ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದವು.

ಕಲಾವಿದೆಯಾಗಿ ಮಾತ್ರವಲ್ಲದೆ ಶ್ರೀದೇವಿ ಉತ್ತಮ ಚಿತ್ರ ಕಲಾವಿದೆಯಾಗಿಯೂ ಮಿಂಚು ಹರಿಸಿದ್ದರು. ಅವರು ಮಾರ್ಚ್ 2010ರಂದು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪೇಟಿಂಗ್ ಸ್ಪರ್ಧೆಯಲ್ಲಿ ಹೌಸ್ ವಿತ್ ದಿ ಮನಿ ಎಂಬ ಕಾನ್ಸೆಪ್ಟ್‍ನ ಚಿತ್ರಕ್ಕಾಗಿ ಬಂದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಕೊಡುಗೆಯಾಗಿ ನೀಡಿದ್ದಳು.

Facebook Comments

Sri Raghav

Admin