ಕೋಲಾರ : ಸ್ಫೋಟಕ ವಸ್ತುಗಳಗಳನ್ನು ಸಾಗಿಸುತ್ತಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arrested-Man

ಕೋಲಾರ, ಫೆ.25- ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ನಂಗಲಿ ಪೊಲೀಸರು ಬಂಧಿಸಿ ಸುಮಾರು 5,25000ರೂ. ಮೌಲ್ಯದ ಮಾಲನ್ನು ವಶಪಡಿಸಿ ಕೊಂಡಿದ್ದಾರೆ.ಆಂಧ್ರದ ಚಿತ್ತೂರು ಜಿಲ್ಲೆಯ ಅಮರನಾಥನಾಯ್ಡು, ಮದನ್‍ಪಲ್ಲಿಯ ಶೇಕ್‍ಅಪ್ತಾಬ್‍ಬಾಷಾ ಬಂಧಿತ ಆರೋಪಿಗಳು.  ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬಣಿ ಗ್ರಾಮದ ಬಳಿ ಚೆಕ್‍ಪೊೀಸ್ಟ್ ತೆರೆದಿದ್ದು, ವಾಹನ ತಪಾಸಣೆ ವೇಳೆ ಯಾವುದೇ ದಾಖಲೆಗಳಿಲ್ಲದೆ, ಪರವಾನಗಿ ಇಲ್ಲದೆ 400 ಸಂಖ್ಯೆಯ ಎಲೆಕ್ಟ್ರಿಕಲ್, ಡಿಟೋನೇಟರ್ ಪ್ಯೂಜ್‍ಗಳು, ಸ್ಲರ್ರಿ ಸ್ಫೋಟಕ ಟ್ಯೂಬ್‍ಗಳನ್ನು ಬೊಲೆರೊ ವಾಹನದಲ್ಲಿ ಸಾಗಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಹಾಗೂ ಆಂಧ್ರಪ್ರದೇಶ ನೋಂದಣಿಯ ಬೊಲೆರೊ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin