ಮಗನಿಂದಲೇ ತಂದೆಯ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Crime-Scene
ಬೆಳಗಾವಿ, ಫೆ.25-ಕ್ಷುಲ್ಲಕ ವಿಚಾರಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೈನಾಪುರ ಗ್ರಾಮದ ನಿವಾಸಿ ರಾಮಸಿದ್ದ ಖೋತ(55) ಕೊಲೆಯಾದ ತಂದೆ. ಇಂದು ಮುಂಜಾನೆ ಮಗ ಸಂತೋಷ್ ಮತ್ತು ತಂದೆ ರಾಮಸಿದ್ದ ಖೋತ ನಡುವೆ ಕೆಲಸದ ವಿಚಾರವಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು , ಸಂತೋಷ್ ತನ್ನ ತಂದೆಗೆ ಬಲವಾಗಿ ಹೊಡೆದಿದ್ದಾನೆ.
ಇದರಿಂದ ಸ್ಥಳದಲ್ಲೇ ತಂದೆ ಸಾವನ್ನಪ್ಪಿದ್ದು , ಸಂತೋಷ್ ಚಿಕ್ಕೋಡಿ ಪೊಲೀಸ್ ಠಾಣೆಗೆ ಹೋಗಿ ಖುದ್ದು ಶರಣಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin